ತುಮಕೂರು: ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಯುವಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಂದೀಶ್ ಬಂಧಿತ ಆರೋಪಿ.
ಏಪ್ರಿಲ್ 21ರಂದು ರಂದು ಪಂಪ್ ಸೆಟ್ ಕಳ್ಳತನಕ್ಕೆ ಬಂದ ಗಿರೀಶ್ ಹಾಗೂ ಗಿರೀಶ್ ಎಂಬಾತನನ್ನು ಪೆದ್ದನಹಳ್ಳಿ ಗ್ರಾಮದ ಕೆಲ ಜನರು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು. ಮಾರನೇ ದಿನ ಗ್ರಾಮದ ನೀರಿನ ಕಟ್ಟೆ ಹಾಗೂ ತೋಟದ ರಸ್ತೆಯಲ್ಲಿ ಯುವಕರ ಶವ ಪತ್ತೆಯಾಗಿತ್ತು.
ಘಟನೆ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಈವರೆಗೆ ಒಟ್ಟು 20 ಆರೋಪಿಗಳನ್ನು ಬಂಧಿಸಿದ್ದಾರೆ..