ಬಸವನ ಬಾಗೇವಾಡಿ :-ತಾಲೂಕಿನ ನರಸಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಂಚನಾಳ ಗ್ರಾಮದಲ್ಲಿ ಮಾಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮದ ರೈತ ಹಣಮಂತ ವಡ್ಡರ ಅವರ ಜಮಿನಿನಲ್ಲಿ ದುಡಿಯೋನ ಬಾ ಅಭಿಯಾನ ಹಮ್ಮಿಕೊಂಡು ಕೃಷಿ ಹೊಂಡದ ಕಾಮಗಾರಿಗೆ ಚಾಲನೆ ನೀಡಲಾಯಿತು ಅಭಿಯಾನದಲ್ಲಿ 19 ಜನ ಮಹಿಳೆಯರು ಹಾಗೂ 4 ಜನ ಪುರುಷ ಕಾರ್ಮಿಕರು ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರು,ತಾಂತ್ರಿಕ ಸಹಾಯಕರು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.