ಕೊಕಟನೂರ: ಶಾಸಕರ ರಮೇಶ್ ಜಾರಕಿಹೊಳಿ ಮಂತ್ರಿಯಾಗಿ ಬರುವುದಾದರೆ ಸ್ವಾಗತಿಸುತ್ತೇನೆ ಅವರು ಬೇಗ ಮಂತ್ರಿಯಾಗಿ ಬರಲಿ ಎಂದು ವಿಧಾನಪರಿಷತ್ ಸದಸ್ಯರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ರಮೇಶ್ ಜಾಕಿಹೊಳಿ ಪರವಾಗಿ ಬ್ಯಾಟ್ ಬೀಸಿದರು.
ಕೊಕಟನೂರ ಗ್ರಾಮದ ಪಶುವೈದ್ಯಕೀಯ ಮಹಾವಿದ್ಯಾಲಯ ಮೂರನೇ ಹಂತದ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತ ಚಟುವಟಿಕೆಗಳು ನಡೆಯುತ್ತಿಲ್ಲ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ನಾನು ಮುಂದಿನ ದಿನದಲ್ಲಿ ಎಲ್ಲರೂ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರದ ಅನುಮತಿ ಪಡೆದು ಪಶುವೈದ್ಯಕೀಯ ಸಿಬ್ಬಂದಿ ನೇಮಕ ಮಾಡುವ ಕುರಿತು ಈಗಾಗಲೇ ಕೇಂದ್ರ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ. ಈ ವರ್ಷದಲ್ಲಿ ಮಹಾವಿದ್ಯಾಲಯ ಪ್ರಾರಂಭ ಮಾಡುವ ಗುರಿಯಲ್ಲಿದ್ದೇವೆ ಇದರ ಊರಿಗೆ ತಲೆಯೆತ್ತುತ್ತಿರುವ ಕಳೆದ ಬಜೆಟಿನಲ್ಲಿ ಘೋಷಿಸಿದಂತೆ ಕೃಷಿ ವಿದ್ಯಾಲಯ ಕಾಮಗಾರಿ 120 ಕೋಟಿ ಮೊದಲ ಹಂತದ ಕಾಮಗಾರಿ ಮೀಸಲಿಡಲಾಗಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದರು.
ಅಲ್ಲದೆ ಇವರ ಪಶುವೈದ್ಯಕೀಯ ಮಹಾವಿದ್ಯಾಲಯ ಜನಸಂಘದ ಅತ್ಯುನ್ನತ ನಾಯಕರಾದ ಬಾಬು ರಾವ್ ದೇಶಪಾಂಡೆ ಅವರ ಹೆಸರು ವಿಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.