ಮೈಸೂರು: ಎಂ. ಲಕ್ಷ್ಮಣ್ಗೆ ಸಿ.ಟಿ ರವಿ ನೋಟಿಸ್ ನೀಡಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಎಂ. ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದಾರೆ.
ನನಗೆ ಇನ್ನೂ ಲೀಗಲ್ ನೋಟಿಸ್ ಬಂದಿಲ್ಲ. ನೋಟಿಸ್ ಪೋಸ್ಟ್ ಮೂಲಕವೋ, ಇತ್ಯಾದಿ ರೂಪದಲ್ಲಿ ಬರಬೇಕಿತ್ತು. ಆದರೆ ಇನ್ನೂ ಬಂದಿಲ್ಲ. ಕೇವಲ ಸಾಮಾಜಿಕ ಜಾಲಣಗಳಲ್ಲಿ ಬಂದಿದೆ ಅದನ್ನು ನೋಡಿದ್ದೇನೆ ಎಂದರು.
ಇನ್ನು ಸಿ. ಟಿ ರವಿ ಅವರಿಗೆ ಪ್ರಚಾರದ ಹುಚ್ಚು ಹಿಡಿದಿದೆ. ಹೀಗಾಗಿ ಮಾದ್ಯಮಗಳಿಗೆ ಆ ನೋಟಿಸ್ ಕೊಟ್ಟಿದ್ದಾರೆ. ನೋಟಿಸ್ ನೀಡುವುದಾದರೆ ನೇರವಾಗಿ ನನಗೆ ನೀಡುತ್ತಿದ್ದರು. ನೀವು ಸಿ.ಟಿ ರವಿ ಅಲ್ಲ ಲೂಟಿ ರವಿ. ನೀವು ಎದುರು ಸಿಕ್ಕರೂ ನಿಮ್ಮನ್ನು ಲೂಟಿ ರವಿ ಎಂದೇ ಕರೆಯುತ್ತೇನೆ. ನಿಮ್ಮ ನೋಟಿಸ್ಗೆ ಹೇಗೆ ಉತ್ತರ ಕೊಡಬೇಕೋ ಹಾಗೇ ಅಲ್ಲೇ ಉತ್ತರ ಕೊಡುತ್ತೇನೆ. ಹೆದರಿಕೊಂಡು ಓಡಿ ಹೋಗುವ ಕೆಲಸ ಮಾಡಲ್ಲ ಎಂದು ಕಿಡಿಕಾರಿದರು.