ಮೈಸೂರು: ಮುಂದಿನ ಚುನಾವಣೆಯಲ್ಲಿ ಎಲ್ಲೆಲ್ಲಿ ಸೂಕ್ತವಾಗಿ, ಯಾರ್ಯಾರು ಗೆಲ್ಲಬಹುದು ಎನ್ನುವುದನ್ನು ನಮ್ಮ ವರಿಷ್ಠರು ಸಮೀಕ್ಷೆ ಮಾಡಿಸುತ್ತಿದ್ದಾರೆ. ಮುಖ್ಯವಾಗಿ ಗೆದ್ದೇ ಗೆಲ್ಲುತ್ತೇವೆ ಎನ್ನುವವರ ಹೆಸರನ್ನು ಮೊದಲನೇ ಪಟ್ಟಿಯಲ್ಲಿ ತಕ್ಷಣ ಬಿಡುಗಡೆ ಮಾಡುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷಾ ವರದಿ ಬಳಿಕ ಮೈಸೂರಿನಿಂದ ನಮ್ಮ ತಾಯಿ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮುಂದಿನ ಚುನಾವಣೆಯಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ತಿಳಿಸಿದ್ದಾರೆ. ಇನ್ನು ಶ್ರಮ ಪಡುವವರನ್ನು ಎರಡನೇ ಪಟ್ಟಿಯಲ್ಲಿ, ಇನ್ನಷ್ಟು ಶ್ರಮ ಪಡಬೇಕು ಎನ್ನುವವರನ್ನು, ಹಾಗೂ ಚುನಾವಣೆ ಉಸ್ತುವಾರಿ ಯಾರಿಗೆ ಕೊಡಬೇಕು ಎನ್ನುವುದನ್ನು ಮೂರನೇ ಪಟ್ಟಿಯಲ್ಲಿ ಪ್ರಕಟ ಮಾಡಲಾಗುತ್ತದೆ. ಹೀಗಾಗಿ ಸಮೀಕ್ಷಾ ವರದಿ ಬಳಿಕ ನಮ್ಮ ತಾಯಿ ಸ್ಪರ್ಧೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.