ಗುಡಿಬಂಡೆ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಉತ್ತಮ ಸಂಸದೀಯ ಪಟುವಾಗಿದ್ದಾರೆಂದು ಪ್ರಜಾ ಸಂಘರ್ಷ ಸಮಿತಿ ಮುಖಂಡ ಎಂ.ಎ ಆದಿನಾರಾಯಣ ತಿಳಿಸಿದರು.
ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ತಾಲೂಕು ಪ್ರಜಾ ಸಂಘರ್ಷ ಸಮಿತಿ ಹಾಗೂ ಜಿ.ವಿ ಶ್ರೀರಾಮರೆಡ್ಡಿ ಅಭಿಮಾನಿ ಬಳಗದಿಂದ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಹಂಪಸಂದ್ರ ಮುಖಂಡ ಎನ್ ಆನಂದ್. ಚನ್ನರಾಯಪ್ಪ ಮಾತನಾಡಿದರು.ಈ ವೇಳೆ ಒಕ್ಕೊರಲಿನಿಂದ ಬಾಗೇಪಲ್ಲಿ ಗುಡಿಬಂಡೆ ಎರಡು ತಾಲೂಕುಗಳ ಕೇಂದ್ರ ಸ್ಥಾನಗಳಲ್ಲಿ ಜಿ.ವಿ ಶ್ರೀರಾಮ ರೆಡ್ಡಿ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಕಂದಾಯ ಇಲಾಖೆ ಆರ್. ಚೌಡಪ್ಪ . ಮುಖಂಡರಾದ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ರಾಜು ಶಿವಪ್ಪ ಶಿವಶಂಕರ ರೆಡ್ಡಿ ಡಾಕ್ಟರ್ ಮೌಲಾಸಾಬ. ಬಿ. ಶ್ರೀನಿವಾಸ ರೆಡ್ಡಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ. ಅಶ್ವತಪ್ಪ ಆದಿನಾರಾಯಣಸ್ವಾಮಿ. ರಾಮಲಿಂಗ ರೆಡ್ಡಿ ಚಂದ್ರಶೇಖರರೆಡ್ಡಿ ಹಾಜರಿದ್ದರು.