ಬೆಂಗಳೂರು: ಕರೊನಾ ಮೂರನೇ ಅಲೆಯಂತೆ ನಾಲ್ಕನೇ ಅಲೆ ಕೂಡಾ ಹೆಚ್ಚು ಅಪಾಯಕಾರಿ ಅಲ್ಲ ಎಂದು ಜಯದೇವ ಆಸ್ಪತ್ರೆ ನಿರ್ದೇಶ ಡಾ.ಮಂಜುನಾಥ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಾಲ್ಕು ವಾರಗಳಲ್ಲಿ ಕರೊನಾ ನಾಲ್ಕನೇ ಅಲೆ ಬರಲಿದೆ. ಆದ್ರೆ ಅದು ಹೆಚ್ಚು ಅಪಾಯಕಾರಿ ಅಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಮೊದಲಿಗೆ ದೆಹಲಿಗೆ ಕರೊನಾ ನಾಲ್ಕನೆ ಅಲೆ ಬರುತ್ತದೆ. ಅನಂತರ ವಿವಿಧ ರಾಜ್ಯಗಳಿಗೆ ಕೊರೊನಾ ಹರಡಲಿದೆ. ರಾಜ್ಯಕ್ಕೂ ಮುಂದಿನ ನಾಲ್ಕು ವಾರಗಳಲ್ಲಿ ಕರೊನಾ ನಾಲ್ಕನೇ ಅಲೆ ಬರಲಿದೆ. ಆದ್ರೆ ಈ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಮೂರನೇ ಅಲೆಯಷ್ಟೇ ನಾಲ್ಕನೆ ಅಲೆ ಕೂಡಾ ಇರುತ್ತದೆ ಎಂದು ಹೇಳಿದ್ದಾರೆ.