ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ,ಡಾ. ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತಿಯನ್ನು , ಸಸಿಗೆ ನೀರೆರೆಯುವ ಮೂಲಕ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ವಿಭಿನ್ನವಾಗಿ ಆಚರಿಸಲಾಯಿತು .
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಶ್ರೀ ಶಶಿಕಾಂತ ಪಡಿಸಲಾಗಿ ಇಂಚಗೇರಿ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಅಂಬೇಡ್ಕರ್ ವಿಚಾರ ಮತ್ತು ಅವರ ಜೀವನ ಶೈಲಿಯ ಬಗ್ಗೆ ಮಾರ್ಗದರ್ಶನ ನೀಡಿದರು.
ಕೊಪ್ಪಳದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷರು ,
ಸತೀಶ್ ಜಾರಕಿಹೊಳಿ, ಬಿಆರ್ ಪಾಟೀಲ್, ರಮೇಶ್ ಸಿಂದಗಿ, ವಿಜಯ ತಳವಾರ್, ದೊಡ್ಡಮನಿ ಶ್ರೀಧರ್ ಹಾಗೂ ಹಲವು ಮುಖಂಡರಿಗೆ ಸತೀಶ್ ಅಣ್ಣ ಜಾರಕಿಹೊಳಿ ಅಭಿಮಾನಿ ಬಳಗ ದಿಂದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.