ಹುಕ್ಕೇರಿ : ಗ್ರಾಮ ಪಂಚಾಯಿತಿ ಆಶ್ರಯದಡಿ ಮನೆಗಳಿಗಾಗಿ ಅರ್ಜಿ ಸ್ವೀಕಾರ.

ಹುಕ್ಕೇರಿ ತಾಲೂಕಿನ ಹೊನ್ನಿಹಳ್ಳಿ ಗ್ರಾಮದಲ್ಲಿ ಕೋಣನಕೇರಿ ಗ್ರಾಮ ಪಂಚಾಯಿತಿ ವಾರ್ಡ್ ಸಭೆಯನ್ನು ಆಯೋಜಿಸಲಾಗಿತ್ತು .
ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವಿಜಯಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಸ್ತಿ, ಸದಸ್ಯರಾದ ಶಬ್ಬೀರ್ , ಸುನಿತಾ ಮಠಪತಿ, ಭೂಪಾಲ, ಶ್ರಾವಣ , ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗೆ ಬಂದಿರುವ ಆಶ್ರಯ ಮನೆಗಳ ಬಗ್ಗೆ ಮಾಹಿತಿ ತಿಳಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ಅರ್ಜಿ ಸ್ವೀಕರಿಸಲಾಯಿತು ಇದೇ ವೇಳೆ ಗ್ರಾಮಸ್ಥರಾದ ರಾವಸಾಹೇಬ್ , ರುದ್ರಪ್ಪ ಜಕಾತೆ, ಅನಿಲ್ , ಮತ್ತಿತರರು ಭಾಗವಹಿಸಿದ್ದರು

Discover more from Valmiki Mithra

Subscribe now to keep reading and get access to the full archive.

Continue reading