ಕರುನಾಡ ವಿಜಯ ಸೇನೆಯ ರಾಜ್ಯ ಯುವ ಘಟಕದ ವತಿಯಿಂದ ಏ.23 ರಂದು ಮೈಸೂರಿನಲ್ಲಿ ಹನುಮ ಜಯಂತೋತ್ಸವ ಉತ್ಸವ ಆಯೋಜಿಸಲಾಗಿದ್ದು ಇಂದು ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರುನಾಡ ವಿಜಯ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಮಹೇಶ್ ಆರ್ ಎಸ್ ಪೋಸ್ಟರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ವಿಜಯ ಸೇನೆಯಲ್ಲಿ ಒಂದುವರೆ ಲಕ್ಷ ಜನ ಕಾರ್ಯಕರ್ತರಿದ್ದಾರೆ. ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಹನುಮ ಜಯಂತೋತ್ಸವ ಉತ್ಸವ ಆರಂಭಿಸಿದ್ದೇವೆ.
ಏ.23 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೂ ಹನುಮ ಜಯಂತೋತ್ಸವ ಉತ್ಸವವನ್ನು ಆಯೋಜಿಸಿದ್ದೇವೆ. ಈಗಿನ ಉತ್ಸವದಲ್ಲಿ 5 ಹನುಮನ ಮೂರ್ತಿಗಳು ಮತ್ತು ಅನೇಕ ಕಲಾತಂಡಗಳು ಭಾಗವಹಿಸುತ್ತವೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಂಟಪವನ್ನು ನಿರ್ಮಿಸಿ ಆಂಜನೇಯಸ್ವಾಮಿಗೆ ಪುಷ್ಪಾರ್ಚನೆ ಮಾಡಲಿದ್ದೇವೆ. ನಟ ಧ್ರುವ ಸರ್ಜಾ ಉತ್ಸವಕ್ಕೆ ಮೆರಗು ನೀಡಲಿದ್ದಾರೆ. 3 ರಿಂದ 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.
ರಾಜ್ಯ ಉಪಾಧ್ಯಕ್ಷ ಸಚ್ಚಿದಾನಂದ,ವಿಜಯಕುಮಾರ್, ಸುರೇಶ್ ಆರ್, ಮಂಜುನಾಥ್ ಪಟೇಲ್ , ಸಂಜಯ್ ಜಿ , ಜೀವನ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.