ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಸಮೀಪ ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ನಾಪತ್ತೆಯಾಗಿದ್ದ ಬಳೂತಿ ಗ್ರಾಮದ ಮೀನುಗಾರ ಸಹೋದರರಿಬ್ಬರ ಶವ ಗುರುವಾರ ಪತ್ತೆಯಾಗಿವೆ. ಬಸಪ್ಪ ದಳವಾಯಿ(24) ಹಾಗೂ ಅಜಯ ದಳವಾಯಿ(20) ಮೃತಪಟ್ಟ ಮೀನುಗಾರರು.
ಮೀನುಗಾರರಾದ ಬಸಪ್ಪ ದಳವಾಯಿ, ಅಜಯ ದಳವಾಯಿ ಈ ಇಬ್ಬರು ಮೀನು ಹಿಡಿಯಲು ಮಂಗಳವಾರ ನದಿಗೆ ಇಳಿದಿದ್ದ ವೇಳೆ ನಾಪತ್ತೆಯಾಗಿದ್ದರು.
ಮೀನುಗಾರ ಸಹೋದರರಿಬ್ಬರ ಮೃತದೇಹಗಳು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸ್’ರ ನಿರಂತರ ಕಾರ್ಯಾಚರಣೆಯಿಂದ ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಎಸ್.ಡಿ.ಮುರಾಳ ಭೇಟಿ ನೀಡಿ, ಪರಿಶೀಲಿಸಿದರು. ಎಎಸ್‌ಐ ಆರ್. ಎಂ.ಬಿರಾದಾರ ಇದ್ದರು