ವಾಶಿಂಗ್ಟನ್: ಜೋ ಬೈಡನ್ ಆಡಳಿತದಲ್ಲಿ ಅಮೆರಿಕವು, ಭಾರತದಲ್ಲಿ ಹೆಚ್ಚುತ್ತಿರುವ ಮುಸ್ಲಿಂ ದ್ವೇಷಾಭಿಯಾನದ ನಡುವೆ ಬೆಂಬಲ ಮುಂದುವರಿಸುತ್ತಿರುವ ಬಗ್ಗೆ ಅಮೆರಿಕಾ ಸಂಸದೆ ಇಲ್ಹಾನ್ ಉಮರ್ ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದ್ವೇಷ ಅಭಿಯಾನದ ಬಗ್ಗೆ ಇಲ್ಹಾನ್ ಉಲ್ಲೇಖಿಸಿದ್ದಾರೆಂದು ವರದಿಯಾಗಿದೆ.
ಭಾರತವನ್ನು ಶಾಂತಿ ಪ್ರಕ್ರಿಯೆಯ ಪಾಲುದಾರ ಎಂದು ಪರಿಗಣಿಸಿಸುವುದನ್ನು ನಿಲ್ಲಿಸಲು ಮೋದಿ ಭಾರತೀಯ ಮುಸ್ಲಿಮರಿಗೆ ಇನ್ನೂ ಏನೇನು ಮಾಡಬೇಕು ಎಂದು ಇಲ್ಹಾನ್ ಅಮೆರಿಕ ಸರಕಾರವನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, ವಿವಿಧ ದೇಶಗಳಲ್ಲಿ ಅಮೆರಿಕಾದ ಒಳಗೊಳ್ಳುವಿಕೆಯನ್ನು ಉಲ್ಲೇಖಿಸಿದ ಅವರು ಅದನ್ನು ‘ಐತಿಹಾಸಿಕ ಅನ್ಯಾಯ’ ಎಂದು ಕರೆದಿದ್ದಾರೆ.
“ಬೈಡನ್ ಆಡಳಿತಕ್ಕೆ ಮಾನವ ಹಕ್ಕುಗಳ ಕುರಿತು ಮೋದಿ ಸರ್ಕಾರವನ್ನು ಟೀಕಿಸಲು ಏಕೆ ಇಷ್ಟವಿಲ್ಲ?” ಎಂದು ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.