ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಸರ್ಕಾರದ ಜನವಿರೋಧಿ ನಡೆಗಳ ವಿರುದ್ಧ ಪ್ರಜಾ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ.

ಬಾಗೇಪಲ್ಲಿ:- ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಮತ್ತು ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರಜಾ ಸಂಘಷ೯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೀನೆ, ದೀನೆ ಕಚ್ಚಾ ತೈಲ , ಗ್ಯಾಸ್ ಬೆಲೆ ಏರಿಕೆ ಗಗನಕ್ಕೆರಿವೆ ಇದರಿಂದ ಜನ ಸಾಮಾನ್ಯರು ಖರೀದಿಸುವ ದಿನ ಬಳಕೆ ವಸ್ತುಗಳ ಬೆಲೆಗಳು ದುಪ್ಪಟ್ಟಾಗಿದೆ ಇದರಿಂದ ಸಾಮಾನ್ಯ ಜನ , ಬಡವರ ಜೀವನ ಕಷ್ಟಕರವಾಗಿದೆ ಪದೆ.ಪದೇ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಕಂಗಾಲಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ದದ ನೆಪವನ್ನು ಮುಂದಿಟ್ಟು ಕೊಂಡು ಕಚ್ಚಾ ತೈಲ ಮತ್ತು ಗ್ಯಾಸ್ ಬೆಲೆಗಳು ಹೆಚ್ಚಳ ಮಾಡಿದ್ದಾರೆ.
ಇವುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಆಡಳಿತ ಸರ್ಕಾರಗಳು ವಿಪಲವಾಗಿವೆ ಎಂದು ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ ವಾಗ್ಧಾಳಿ ಮಾಡಿದರು .

ಇದಕ್ಕೂ ಮುಂಚೆ ಪ್ರಜಾ ಸಂಘರ್ಷ ಸಮಿತಿ ಕಾರ್ಯಕರ್ತರು ಡಾ.ಹೆಚ್.ನರಸಿಂಹಯ್ಯ ವೃತ್ತದಿಂದ ಬಸ್ ನಿಲ್ದಾಣದ ವರೆಗೂ ಮುಖ್ಯ ರಸ್ತೆಯಲ್ಲಿ ಸರ್ಕಾರದ ಕಾರ್ಯ ವೈಖರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಜಿ.ಎಂ.ರಾಮಕೃಷ್ಣಪ್ಪ, ತಾ.ಪಂ.ಮಾಜಿ ಸದಸ್ಯ ಗೋಪಾಲಕೃಷ್ಣ,ಗ್ರಾಂ.ಪಂ.ಮಾಜಿ ಸದಸ್ಯ ಮಂಜುನಾಥ, ಮುಖಂಡರಾದ ಎಲ್.ವೆಂಕಟೇಶ್,ಭಾಷ, ಜನಾಭೀ, ಮತ್ತಿತರರು ಭಾಗವಹಿಸಿದ್ದರು

Discover more from Valmiki Mithra

Subscribe now to keep reading and get access to the full archive.

Continue reading