ಸೇವಾ ಭದ್ರತೆಗಾಗಿ ಕೋವಿಡ್19 ವಾರಿಯರ್ಸ್ ಇಂದ ಪ್ರತಿಭಟನೆ.

ಚಿಕ್ಕಬಳ್ಳಾಪುರ:- ಸಂಕಷ್ಟದಲ್ಲಿ ಆಪತ್ಭಾಂದವರಂತೆ ತಮ್ಮ ಅಮೂಲ್ಯ ಜೀವಗಳನ್ನು ಒತ್ತೆ ಇಟ್ಟು ಜೀವ ರಕ್ಷಕರಾಗಿ ಕಾರ್ಯ ನಿವ೯ಹಿಸಿ ಅನೇಕ ರೋಗಿಗಳ ಸೇವೆ ಮತ್ತು ಹಾರೈಕೆ ಮಾಡಿದ, ಮತ್ತು ಪ್ರಾಣಿಗಳನ್ನು ರಕ್ಷಿಸಿದ ಸಿಬ್ಬಂದ್ದಿಗೇ ಸೇವಾ ಭದ್ರತೆಯನ್ನು ಕಲ್ಪಿಸಬೇಕು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಮುಖ್ಯ ರಸ್ತೆಯಲ್ಲಿ ಸಕಾ೯ರದ  ವಿರುದ್ಧ ವಾರಿಯರ್ಸ್ ಗಳು ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೆತೃತ್ವವಹಿಸಿ ಮಾತನಾಡಿದ ಗಿರೀಜಾ:  ಸಕಾ೯ರ ಮತ್ತು ಆರೋಗ್ಯ ಇಲಾಖೆಯ ಅಡಿಯಲ್ಲಿ ಕೋವಿಡ್ 19 ಜಿಲ್ಲಾಧ್ಯಾಂತ ವ್ಯಾಪಿಸಿದಾಗ  115 ಜನ  ವಾರಿಯರ್ಸ್ ತಂಡ  26 ತಿಂಗಳ ನಿಂದ  ಹಗಲು ರಾತ್ರಿ ಸೇವೆಯನ್ನು ಮಾಡಿದ್ದೆವೆ.
ಆದರೆ ಸಕಾ೯ರ ನಮಗೆ ಈವರೆಗೂ ಯಾವುದೇ ಸೇವಾ ಭದ್ರತೆಯನ್ನು ಒದಗಿಸಲಿಲ್ಲ ಮತ್ತು ನಮ್ಮನ್ನು ಅವಶ್ಯಕತೆಗೆ ತಕ್ಕಂತೆ  ನಮ್ಮ ತಂಡದ ಸೇವೆಯನ್ನು ಬಳಸಿಕೊಂಡಿದೆ ನಮ್ಮ ವಾರಿಯರ್ಸ್ ಕೂಡ ನಿರಂತರವಾಗಿ ರೋಗಿಗಳನ್ನು ಹಾರೈಕೆ ಮಾಡಿ ಅನೇಕ ಜೀವಗಳನ್ನು ರಕ್ಷಿಸಿದ್ದೆವೆ.
ಅದ್ದರಿಂದ ಆರೋಗ್ಯ ಇಲಾಖೆ ನಮ್ಮ ಸೇವೆಯನ್ನು ಪರಿಗಣಿಸಿ ವಾರಿಯರ್ಸಗಳಾಗಿ ಮುಂದುವರಿಸ ಬೇಕು ಮತ್ತು ನಮಗೆ ಕೂಡಲೇ ಸೇವಾ ಭದ್ರತೆಯನ್ನು ನೀಡ ಬೇಕೆಂದು ಒತ್ತಾಯಿಸಿದರು.

ಸಂಕಷ್ಟದಲ್ಲಿ ಆರೋಗ್ಯ ಇಲಾಖೆ ನಮ್ಮನ್ನು ಬಳಸಿಕೋಂಡು ಈಗ ಕೈ ಬಿಡುತ್ತಿರುವುದರಿಂದ ನಮ್ಮ ಬದುಕು ಅತಂತ್ರವಾಗಿದೆ.
ಸಂಕಷ್ಟದ ಸಮಯದಲ್ಲಿ ಇಷ್ಟೇಲ್ಲಾ ಸೇವೆಮಾಡಿದ ನಮ್ಮನ್ನು ಸರಕಾರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಈಗ ಇದ್ದಕ್ಕಿದ್ದಂತೆ ಏಕಾಏಕಿಯಾಗಿ ನಮ್ಮನ್ನು ಸೇವೆಯನ್ನು ರದ್ದುಗೋಳಿಸಲು ಮುಂದಾಗಿದೆ ,
ಈ ನಿಧಾ೯ರವನ್ನು ಕೈಬಿಟ್ಟು ಆರೋಗ್ಯ ಇಲಾಖೆಯಲ್ಲಿ ನಮ್ಮ ಸೇವೆಯನ್ನು ಪರಿಗಣಿಸಿ ಮುಂದುವರಿಸಿಬೇಕೆಂದು ಆಗ್ರಹಿಸಿ ಸರ್ಕಾರಕ್ಕೆ ಅಪಾರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿರೀಷಾ,ಗಂಗರಾಜು ಅಬ್ಬಾಸ್,ಗಗನ್,ಶ್ರೀಕಂಠ,ರೆಡ್ಡಮ್ಮ,ನರಸಿಂಹ,ಸುಮ, ನಂದಿನಿ ಮೋದಲಾದವರು

Discover more from Valmiki Mithra

Subscribe now to keep reading and get access to the full archive.

Continue reading