ಮಾನ್ವಿ ನಗರದ ಐ ಬಿ ಸರ್ಕಲ್ ನಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನ ಮಂತ್ರಿಗಳಾದ ಡಾ// ಬಾಬುಜಗಜೀವನರಾಂ ರವರ “115 ನೇ” ಜನ್ಮದಿನಾಚರಣೆಯನ್ನು ಮಾಲಾರ್ಪಣೆ ಮಾಡುವ ಮೂಲಕ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು. ಮಾನವಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜಾ ವೆಂಕಟಪ್ಪ ನಾಯಕ ಮಾನವಿ ಮಾತಾನಾಡಿ ಬಾಬುಜಗಜೀವನರಾಂ ದೇಶದ ಬೇಸಾಯದಲ್ಲಿ ವೈಜ್ಞಾನಿಕ ಬದಲಾವಣೆಗೆ ಆದ್ಯತೆ ನೀಡಿದ್ದಾರೆ…”ಇಂತಹ ಮಹಾನ್ ನಾಯಕರು ನಮ್ಮ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ತತ್ವಾದರ್ಶಗಳನ್ನು ಯುವಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಹೇಳಿದರು….ಇದೆ ಸಂದರ್ಭದಲ್ಲಿ ಪುರಸಭೆಯ ಹಿರಿಯ ಸದಸ್ಯರಾದ ರಾಜಾ ಮಹೇಂದ್ರ ನಾಯಕ,ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾದ ರಾಜಾ ರಾಮಚಂದ್ರ ನಾಯಕ, ಪುರಸಭೆಯ ಸದಸ್ಯರಾದ ಶರಣಪ್ಪ ಮೇದ್, ಮುಖಂಡರಾದ ಪಿ ರವಿಕುಮಾರ್,ಮೌಲ ಸಾಬ್, ಜಸ್ವಂತ್ ಸೇಠ,ರಾಘವೇಂದ್ರ ಸವಾಯಿ,ಶಿವರಾಂ ರೆಡ್ಡಿ ಹೊಸೂರು,ತಹಶೀಲ್ದಾರ ಎಲ್ ಡಿ ಚಂದ್ರಕಾಂತ,ಗ್ರೇಡ್ -2 ತಹಶೀಲ್ದಾರ ಅಬ್ದುಲ್ ವಾಹಿದ್,ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಯಾದ ಸ್ಟೆಲ್ಲಾ ವರ್ಗಿಸ್,ಕ್ಷೇತ್ರ ಶಿಕ್ಷಣ ಅಧಿಕಾರಿ ಯಾದ ವೆಂಕಟೇಶ್ ಗುಡಿಹಾಳ, ಅರಣ್ಯ ಇಲಾಖೆಯ ಅಧಿಕಾರಿಯಾದ ರಾಜೇಶ ನಾಯಕ,ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಯಾದ ಚಂದ್ರಶೇಖರ ಹಿರೇಮಠ, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ಎಲ್ಲಾ ಸಮಾಜದ ಮುಖಂಡರು ಉಪಸ್ಥಿತರಿದ್ದರು..