ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾಸಮಿತಿ ವತಿಯಿಂದ ಇಂದು ಮಾನ್ವಿ ತಾಲೂಕು ಐಬಿಯಲ್ಲಿ ವಾಲ್ಮೀಕಿ ಸಮಾಜದ ಎಲ್ಲಾ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಮುಖಂಡರುಗಳ ಉಪಸ್ಥಿತಿಯಲ್ಲಿ ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಪರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ 54 ದಿನಗಳಿಂದ ಮೀಸಲಾತಿಗಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಸರ್ಕಾರ ಅವರ ಹೋರಾಟವನ್ನು ಗೌರವಿಸಿ ಅವರ ಮನವಿಯನ್ನು ಸ್ವೀಕರಿಸಿದ ಕಾರಣ ಯಾವುದೇ ಸ್ವಾಮೀಜಿಯವರು ನಮಗೆ ಕರೆ ನೀಡಿದಾಗ ನಾವು ಎಲ್ಲಾ 153 ಸಮುದಾಯಗಳು ಒಂದಾಗಿ ಹಳ್ಳಿಹಳ್ಳಿಗಳಿಂದ ಸ್ವಾಮೀಜಿಗಳಿಗೆ ಬೆಂಬಲ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.