ಹುಕ್ಕೇರಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಬಾಲ್ಯವಿವಾಹ ನಿಷೇಧ ಪ್ರಮಾಣವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾದೇವಿ ಕುಮಾರ್ ತೂದಲೇ ವಹಿಸಿದ್ದರು,
ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಾದ ಸುರೇಶ್ ಬಾಳಪ್ಪ ಗಸ್ತಿ , ಶಿಶು ಅಭಿವೃದ್ಧಿ ಇಲಾಖೆ ನೋಡಲ್ ಅಧಿಕಾರಿಗಳಾದ ಹೊಳೆಪ್ಪ, ಮೇಲ್ವಿಚಾರಕರಾದ ಕೆ.ಕೆ.ಹಿರೇಮಠ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತರು ಸಹಾಯಕಿಯರು ಮತ್ತು ಊರಿನ ಗ್ರಾಮಸ್ಥರು ಪ್ರಮಾಣವಚನ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.