ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದಲ್ಲಿ ವಾಲ್ಮೀಕಿ ಗುರುಪೀಠದ ಸಂಸ್ಥಾಪಕರಾದ ಹಾಗೂ ಸಮಾಜದ ಅಂತರಂಗ ಜೀವಿಯಾದ ಪರಮಪೂಜ್ಯ ಲಿಂಗೈಕ್ಯ ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು…. ಈ ಸಮಾರಂಭದಲ್ಲಿ ಪುಣ್ಯಾನಂದಪುರಿ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಮಾಡಲಾಯಿತು..
ಈ ಸಂದರ್ಭದಲ್ಲಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಶ್ರೀ ಗಂಗಾಧರ ನಾಯಕ್ ಮಾತನಾಡಿ ಪುಣ್ಯಾನಂದಪುರಿ ಮಹಾಸ್ವಾಮಿಗಳು ಇವತ್ತು ವಾಲ್ಮೀಕಿ ಗುರುಪೀಠ ವನ್ನು ಸ್ಥಾಪನೆಮಾಡಿ ಒಂದು ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ ಹಾಗೂ ಸಮಾಜ ಒಗ್ಗಟ್ಟಾಗಿ ಒಂದು ಕಡೆ ಸೇರಿಸಲು ಅನುವು ಮಾಡಿಕೊಟ್ಟಿದ್ದಾರೆ, ಅವರನ್ನು ಇಂದು ಮನದಾಳದಲ್ಲಿ ನೆನೆಯುವಂಥ ದಿನವಾಗಿದೆ ಹಿಂದಿಗೆ ಅವರನ್ನು ಕಳೆದುಕೊಂಡು ನಾವು ಹದಿನೈದು ವರ್ಷಗಳನ್ನು ಅನುಭವಿಸಿದ್ದೇವೆ, ಹಾಗೂ.. ಇವತ್ತು ಸಮಾಜಕ್ಕಾಗಿ ಹಾಗೂ ಸಮಾಜದ ಮೀಸಲಾತಿಗಾಗಿ 7.5 ಪ್ರತಿಶತ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಿಸುವುದಕ್ಕಾಗಿ ವಾಲ್ಮೀಕಿ ಗುರುಪೀಠದ ಪ್ರಸ್ತುತ ಎರಡನೆಯ ಗುರುಗಳಾದ ಮಾನ್ಯ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಿರಂತರ ಧರಣಿಯನ್ನು 53ನೇ ದಿವಸ ಕಳೆದಿವೆ ಇನ್ನು ನಿರಂತರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ ಆದರೆ ಮಾನ್ಯ ಗುರುಗಳು ಇನ್ನೂ ವಾಲ್ಮೀಕಿ ಸಮಾಜಕ್ಕೆ ಪ್ರತಿಭಟನೆಗೆ ಆಹ್ವಾನ ನೀಡಿರುವುದಿಲ್ಲ, ಒಂದು ವೇಳೆ ಪ್ರತಿಭಟನೆಗೆ ಆಹ್ವಾನ ನೀಡಿದರೆ ಇಡೀ ಸಮಾಜವು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಹಾಗೂ ಈ ಸಂದರ್ಭದಲ್ಲಿ ತಾಲೂಕ ವಾಲ್ಮೀಕಿ ನಾಯಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಾನ್ಯ ಶ್ರೀ ವೆಂಕಟೇಶ ಬೇಟೆಗಾರ ಮಾತನಾಡಿ ಪುಣ್ಯಾನಂದಪುರಿ ಮಹಾಸ್ವಾಮಿಗಳು ಸಮಾಜವನ್ನು ಒಗ್ಗಟ್ಟಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಸಮಾಜಕ್ಕೆ ಒಂದು ಗುರುಪೀಠ ಬೇಕೆಂದು ಪರಿಕಲ್ಪನೆಯನ್ನು ನೀಡಿದವರು ಪುಣ್ಯಾನಂದಪುರಿ ಸ್ವಾಮಿಗಳು ಹಾಗೂ ಇವತ್ತು ಅವರನ್ನು ಕಳೆದುಕೊಂಡು 15 ವರ್ಷ ಕಳೆದಿವೆ, ಆದರೂ ಅವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂಬ ಭಾವನೆಯನ್ನು ಹೊಂದಿದ್ದೇವೆ,
ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ವಾಲ್ಮೀಕಿ ಗುರುಪೀಠದ ಎರಡನೆಯ ಗುರುಗಳಾದ ಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ನಿರಂತರ ಧರಣಿಯನ್ನು ಹಮ್ಮಿಕೊಂಡಿದ್ದಾರೆ ಇಂದಿಗೆ 53 ದಿನಗಳು ಕಳೆದಿವೆ ಆದರೂ ಸರಕಾರ ಇದುವರೆಗೆ ಯಾವುದೇ ರೀತಿಯ ಸ್ಪಂದನೆ ನೀಡದಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಾಲ್ಮೀಕಿ ಸಮಾಜದ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ರಮೇಶ್ ದೊರೆ ಮಾತನಾಡುತ್ತಾ ಪುಣ್ಯಾನಂದಪುರಿ ಮಹಾಸ್ವಾಮಿಗಳು ಅವರ ಅಜರಾಮರವಾಗಿ ಉಳಿದಿರುವ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಅವರನ್ನು ಎಂದು ನಡೆಯುವಂತಹ ದಿನವಾಗಿದೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಗಾಗಿ ವಾಲ್ಮೀಕಿ ಗುರುಪೀಠದ ಎರಡನೇ ಗುರುಗಳಾದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು ನಿರಂತರ ಧರಣಿಯನ್ನು ಹಮ್ಮಿಕೊಂಡಿದ್ದಾರೆ ಅವರು ಸಮಾಜಕ್ಕೆ ಕರೆಕೊಟ್ಟಾಗ ಇಡೀ ಸಮಾಜವು ಅವರಿಂದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿರುವ ಕಲ್ಯಾಣ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ರಾಯಚೂರು ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಂಗಪ್ಪ ನಾಯಕ್ ಮಾತನಾಡುತ್ತಾ ಪುಣ್ಯಾನಂದಪುರಿ ಮಹಾಸ್ವಾಮಿಗಳು ಇಂದು ಚಿರಂಜೀವಿಯಾಗಿ ಉಳಿದಿದ್ದಾರೆ ಹಾಗೂ ಅವರು ಮಾಡಿರುವ ಕಾರ್ಯಗಳು ಅಜರಾಮರವಾಗಿ ಉಳಿದಿದೆ ವಾಲ್ಮೀಕಿ ಸಮಾಜದ ಒಗ್ಗಟ್ಟಿಗಾಗಿ ನಿರಂತರ ದುಡಿದಿದ್ದಾರೆ ಹಾಗೂ ಎರಡನೆಯ ಗುರುವರ್ಯರಾದ ಪೂಜ್ಯ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳು ಪರಿಶಿಷ್ಟ ಪಂಗಡದ ಶೈಕ್ಷಣಿಕವಾಗಿ ಹಾಗೂ ಉದ್ಯೋಗಕ್ಕಾಗಿ ಮೀಸಲಾತಿಯನ್ನು ಪ್ರತಿಶತ 7.5% ಹೆಚ್ಚಿಸುವುದಕ್ಕಾಗಿ ನಿರಂತರ ಧರಣಿಯನ್ನು ಇಂದಿಗೆ 53 ದಿನಗಳು ಕಳೆದಿವೆ ಅವರು ಸಮಾಜಕ್ಕೆ ಕರೆ ನೀಡಿದಾಗ ನಾವು ಬೆಂಬಲವಾಗಿ ನಿಲ್ಲುತ್ತದೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಿರಿಯ ಮುಖಂಡರಾದ ಶ್ರೀ ದೇವಿಂದ್ರಪ್ಪ ಬಳಿಚಕ್ರ ಮಾತನಾಡುತ್ತಾ ಇವತ್ತು ನಾವೆಲ್ಲರೂ ಒಗ್ಗಟ್ಟಾಗಿರುವುದು ಪುಣ್ಯಾನಂದಪುರಿ ಮಹಾ ಸ್ವಾಮಿಗಳ ಕೃಪೆ ಅವರು ಸಮಾಜವನ್ನು ಒಗ್ಗಟ್ಟಾಗಿ ಮಾಡುವಲ್ಲಿ ನಿರಂತರ ಶ್ರಮ ವಹಿಸಿದ್ದಾರೆ ಎಂದು ಹೇಳಿದರು.
ಹಾಗೂ ಇನ್ನೂ ಹಲವಾರು ಮುಖಂಡರು ಯುವಕರು ಮಾತನಾಡಿದರು
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖಂಡರುಗಳು ಶ್ರೀ ಗುಂಡಪ್ಪ ಸೊಲ್ಲಾಪುರ್, ಶ್ರೀ ದೇವಿಂದ್ರಪ್ಪ ಬಳಿಚಕ್ರ, ಆದಯ್ಯ ಗುರಿಕಾರ್, ಶ್ರೀ ಮೌನೇಶ್ ಗುರಿಕಾರ, ಶ್ರೀ ಶರಣಗೌಡ ಗೌಡಗೇರಿ, ಪುರಸಭೆ ಸದಸ್ಯರಾದ ಶ್ರೀ ಪರಶುರಾಮ್ ಹಾಗೂ ಶ್ರೀ ಅಂಬರೀಶ್ ದೊರೆ ಹೊಸೂರು, ಹಾಗೂ ಸಮಾಜದ ಮುಖಂಡರಾದ ಶ್ರೀ ಪರಮಣ್ಣ ವಡಿಕೇರಿ, ಶ್ರೀ ಸೋಮನಗೌಡ ಬೈಲಾಪುರ್, ಶ್ರೀ ಬಸಣ್ಣ ಚಿಂಚೋಡಿ, ಶ್ರೀ ಅಮರಣ್ಣ ದೊರೆ, ಶ್ರೀ ಗ್ವಾಲಪ್ಪ ಮಲ್ಕೋಜಿ, ಮಾಜಿ ಪುರಸಭೆ ಸದಸ್ಯರಾದ ಗ್ವಾಲಪ್ಪ ದೊರೆ, ಹಾಗೂ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.