ವಾಲ್ಮೀಕಿ ಗುರುಪೀಠದ ಪ್ರಥಮ ಜಗದ್ಗುರುಗಳಾಗಿ ರಾಜ್ಯದಾದ್ಯಂತ ಸಂಚರಿಸಿ ಶೋಷಿತ ನಾಯಕ ಜನಾಂಗಕ್ಕೆ ಶಕ್ತಿತುಂಬುವ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರಕಿಸಿಕೊಡಲು ಹೋರಾಟ ನಡೆಸಿದ ಪುಣ್ಯಾನಂದಪುರಿ ಶ್ರೀಗಳು ಆಕಸ್ಮಿಕವಾಗಿ ನಡೆದ ರೈಲ್ವೆ ಅಪಘಾತದಲ್ಲಿ ನಿಧನರಾಗಿ ಇಡೀ ಸಮಾಜವೇ ಶೋಕ ಸಾಗರದಲ್ಲಿ ಮುಳುಗಿತ್ತು. ಪುಣ್ಯಾನಂದಪುರಿ ಶ್ರೀಗಳು ಸಮಾಜವನ್ನು ಸಂಘಟಿಸಿ ಮುನ್ನಡೆಸಿದ ರೀತಿಯು ಇಂದಿಗೂ ಸಮಾಜಕ್ಕೆ ಪ್ರೇರಕ ಶಕ್ತಿಯಾಗಿದೆ. ಶೈಕ್ಷಣಿಕವಾಗಿ ನಾವು ಶಕ್ತಿವಂತರಾದರೆ ಮಾತ್ರ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬದಲಾವಣೆ ಹೊಂದಲು ಸಾಧ್ಯ ಎಂಬ ಜಾಗೃತಿಯನ್ನು ಇಂದಿನ ಪೀಠಾಧಿಪತಿಗಳಾದ ಶ್ರೀ ಶ್ರೀ ಪ್ರಸನ್ನಾನಂದಪುರಿ ಶ್ರೀಗಳು ಮೂಡಿಸಿ ಸಮಾಜಕ್ಕೆ ರಾಜ್ಯ ಸರ್ಕಾರವು ನೀಡಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಅನುಕೂಲ ಮಾಡಿಕೊಡಬೇಕು ಎಂದು ಸುದೀರ್ಘವಾದ ಹೋರಾಟ ನಡೆಸಿದ್ದಾರೆ. ನಾಯಕ ಸಮಾಜದ ಬಂಧುಗಳು ಸಂಘಟಿತರಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಮೀಸಲಾತಿಯನ್ನು ಪಡೆದುಕೊಂಡು ಶ್ರೀ ವಾಣಿಯ ಮಾರ್ಗದರ್ಶನದಲ್ಲಿ ಮುನ್ನಡೆದು ಅಭಿವೃದ್ಧಿ ಹೊಂದಬೇಕು ಎಂದು ಆರ್.ಜಗಧೀಶ್ ಮನವಿ ಮಾಡಿದರು..
ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ನರೇಂದ್ರನಾಯಕ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಯಜಮಾನರಾದ ಅಚ್ಯುತನಾಯಕ, ಚೆಲುವಪ್ಪನಾಯಕ, ಮುಖಂಡರಾದ ವಕೀಲ ರಘು, ಮುತ್ತುನಾಯಕ, ಅಣ್ಣಪ್ಪನಾಯಕ, ರಾಮನಾಯಕ, ಭೈರನಾಯಕ, ಆಲಂಬಾಡಿಕಾವಲು ರಾಜನಾಯಕ ಮತ್ತಿತರರು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ