*ಬಸವನ ಬಾಗೇವಾಡಿ* ತಾಲೂಕಿನ ಮುತ್ತಗಿ ಗ್ರಾಮದಲ್ಲಿ ವಾಲ್ಮೀಕಿ ಗುರುಪೀಠದ ಮೊದಲ ಜಗದ್ಗುರು ಪುಣ್ಯಾನಂದಪುರಿ ಸ್ವಾಮಿಜಿ ಅವರ 15ನೇ ಪುಣ್ಯಾರಾಧನೆ ಯನ್ನು ಅಖೀಲ ಕರ್ನಾಟಕ ವಾಲ್ಮೀಕಿ ಮಾಹಾಸಭಾ ತಾಲೂಕಾ ಘಟಕದಿಂದ ಆಚರಿಸಲಾಯಿತು.ಮಾಹಾಸಭಾ ತಾಲೂಕಾ ಅಧ್ಯಕ್ಷ ಪಿ.ವೈ ಕೂಳೂರ ಮಾತನಾಡಿ ಪುಣ್ಯಾನಂದಪುರಿ ಗುರುಗಳು ತಳಮಟ್ಟದಿಂದ ರಾಜ್ಯಾಧ್ಯಂತ ಸಮಾಜವನ್ನು ಸಂಘಟಿಸಿ ವಾಲ್ಮೀಕಿ ಸಮಾಜವನ್ನು ಒಗ್ಗೂಡಿಸಿದರು ಅವರ ಹಾದಿಯಲ್ಲಿಯೇ ಎರಡನೆಯ ಜಗದ್ಗುರು ಪ್ರಸನ್ನಾಂದಪುರಿ ಸ್ವಾಮಿಜಿ ಅವರು ಸಮಾಜವನ್ನು ಮುನ್ನಡೆಸಿಕೊಂಡು ಹೋರಟಿದ್ದಾರೆ ಎಂದರು. ತಾಲೂಕು ಪದಾಧಿಕಾರಿಗಳು ಹಾಗೂ ಮತ್ತಗಿ ಗ್ರಾಮದ ಸಮಾಜದ ಭಾಂದವರು ಆಚರಣೆಯಲ್ಲಿ ಉಪಸ್ಥಿತರಿದ್ದರು