ವಾಲ್ಮೀಕಿ ಗುರುಪೀಠದ ಪ್ರಥಮ ಗುರುಗಳು ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಗಳ 15ನೇ ವರ್ಷದ ಪುಣ್ಯ ಸ್ಮರಣೆಯನ್ನು ?? ಇಂದು ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣ ವೇದಿಕೆ ವತಿಯಿಂದ ನೆರವೇರಿಸಲಾಯಿತು…
ಇದೆ ಸಂದರ್ಭದಲ್ಲಿ ಪುಣ್ಯಾನಂದ ಪುರಿ ಸ್ವಾಮೀಜಿಗಳ ತಾಯಿ ರವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣ ವೇದಿಕೆ ವತಿಯಿಂದ ತೀರ್ಮಾನ ಕೈಗೊಳ್ಳಲಾಯಿತು….
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ದ್ಯಾವಪ್ಪ ನಾಯಕ, ಪ್ರಭಾಕರ್ ಹುಣಸೂರು, ಮೈಸೂರು ಚಾಮರಾಜನಗರ ಜಿಲ್ಲೆಯ ನೌಕರರ ಸಂಘದ ಅಧ್ಯಕ್ಷರಾದ ಇಂಜಿನಿಯರ್ ಜಗದೀಶ್ ರವರು, ಪಿ ದೇವರಾಜು, ನರಸನಾಯಕರು,ಶ್ರೀಧರ್ ಚಾಮುಂಡಿ ಬೆಟ್ಟ, ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಿನಕಲ್ ರಾಜಣ್ಣ ರವರು, ಪ್ರಥಮ ದರ್ಜೆ ಗುತ್ತಿಗೆದಾರರಾದ ನಿಂಗರಾಜ್ ರವರು, ವಕೀಲರಾದ ಲೋಕೇಶ್ ರವರು, ಕೈಗಾರಿಕೆ ಮಂಜುನಾಥ್ ರವರು, ಶಿವಪ್ರಕಾಶ್, ರೋಹಿತ್, ಚನ್ನಾನಾಯಕ ಕೋಟೆ, ಸೋಮು, ರಘು ಯಡಕೊಳ, ಉಪಸ್ಥಿತರಿದ್ದರು