ಒಮಿಕ್ರಾನ್ ಗಿಂತ 10 ಪಟ್ಟು ವೇಗವಾಗಿ ಹರಡಬಲ್ಲ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಜಗತ್ತು ಮತ್ತೆ ಆತಂಕಕ್ಕೆ ಒಳಗಾಗಿದೆ.
ಇಂಗ್ಲೆಂಡ್ ನಲ್ಲಿ ಜನವರಿ 19ರಂದು ಈ ಹೊಸ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಇದು ಬಿಎ-2 ರೂಪಾಂತರಿ ವೈರಸ್ ಎಕ್ಸ್ ಇ ಎಂದು ಹೆಸರಿಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಈ ವಿಷಯವನ್ನು ಪ್ರಕಟಿಸಿದ್ದು, ಕೊರೊನಾ ವೈರಸ್ ನ ರೂಪಾಂತರಿ ವೈರಸ್ ಗಳಲ್ಲಿ ಅತ್ಯಂತ ವೇಗವಾಗಿ ಹರಡಬಲ್ಲ ವೈರಸ್ ಒಮಿಕ್ರಾನ್ ಎಂದು ಗುರುತಿಸಲಾಗಿತ್ತು. ಆದರೆ ಈಗ ಪತ್ತೆಯಾಗಿರುವ ಎಕ್ಸ್ ಇ ವೈರಸ್ ಒಮಿಕ್ರಾನ್ ಗಿಂತ 10 ಪಟ್ಟು ವೇಗಿ ಎಂದು ಎಚ್ಚರಿಕೆ ನೀಡಿದೆ.
ಒಮಿಕ್ರಾನ್ ನಿಂತ ಎರಡು ಭಿನ್ನ ವೈರಸ್ ರೂಪಾಂತರಗೊಂಡಿದ್ದು, ಇದನ್ನು ಬಿಎ-1 ಮತ್ತು ಬಿಎ-2 ಎಂದು ಹೇಳಲಾಗಿದೆ. ಸದ್ಯಕ್ಕೆ ಇದು ಅತ್ಯಂತ ಕಡಿಮೆ ಜನರಿರುವ ಪ್ರದೇಶಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿವರಿಸಿದೆ.