ಇನ್ಮುಂದೆ ಟಿಪ್ಪು ಸುಲ್ತಾನ್‌ ‘ಮೈಸೂರು ಹುಲಿ ಅಲ್ಲ’, ಪಠ್ಯದ ಕಡಿತಕ್ಕೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ಗೆ ಸಂಬಂಧಪಟ್ಟಂತೆ ಇರಲಾಗಿರುವ ಮೈಸೂರು ಹುಲಿ ಎನ್ನುವ ಹೆಸರಿಗೆ ಕೊಕ್‌ ನೀಡಲು ಪಠ್ಯ ಪುಸ್ತಕ ಸಮಿತಿ ಮುಂದಾಗಿದೆ ಎನ್ನಲಾಗಿದೆ. ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಈಗಾಗಲೇ ಮೈಸೂರು ಹುಲಿ ಎನ್ನುವ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಬಿರುದು ಯಾರು ನೀಡಿದ್ದಾರೆ ಅಂತ ಪ್ರಶ್ನೆ ಮಾಡಿದ್ದಾರೆ.

 

ಟಿಪ್ಪುವಿಗೆ ಸಂಬಂಧಪಟ್ಟಂತೆ ಪರಿಷ್ಕರಣೆ ಪಠ್ಯ ಮಾಡಲಿದ್ದು, ಟಿಪ್ಪುವನ್ನು ಇನ್ಮುಂದೆ ಹೊಸ ರೀತಿಯಲ್ಲಿ ಮಕ್ಕಳು ಓದಲಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಿದ್ದತೆಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ನಡೆಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಅಧಿಕೃತವಾಗಿ ತೆರೆ ಬೀಳಲಿದೆ. ಈ ನಡುವೆ ಪರಿಷ್ಕರಣೆ ಸಮಿತಿ ಪಠ್ಯದಲ್ಲಿರುವ ಟಿಪ್ಪುವಿನ ಬಗ್ಗೆ ಅನಗತ್ಯವಾಗಿ ವೈಭವಿಕರಣ ಮಾಡಲಾಗುವುದರ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪುವಿಗೆ ಇದ್ದ ಮೈಸೂರು ಹುಲಿ ಬಿರುದು ಕೂಡ ಕೈ ಬಿಡುವುಂತೆ ವರದಿ ಸಲ್ಲಿಸಿದೆ. ಇನ್ನೂ ಪಠ್ಯಕ್ಕೆ ಪೂರಕವಲ್ಲದ ಮಾಹಿತಿಗಳನ್ನು ಬಿಡಲಾಗಿದ್ದು, ಬ್ರಿಟಿಶರ ವಿರುದ್ದ ಹೋರಾಡಿದ ಮಾಹಿತಿಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆಯಂತೆ.

Discover more from Valmiki Mithra

Subscribe now to keep reading and get access to the full archive.

Continue reading