25 ರ ಯುವತಿಯನ್ನು ವಿವಾಹವಾಗಿ ಸುದ್ದಿಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು

ತುಮಕೂರು: 2021ರ ಅಕ್ಟೋಬರ್ 19ರಂದು 45 ವರ್ಷದ ವ್ಯಕ್ತಿಯೊಬ್ಬರು 25 ವರ್ಷದ ಯುವತಿಯನ್ನು ಮದುವೆಯಾಗಿದ್ದು ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಅಪರೂಪದ ಮದುವೆ ಇದೀಗ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.

 

25 ವರ್ಷದ ಮೇಘನಾಳನ್ನು ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಹೊಲದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹುಲಿಯೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾ, ಶಂಕರಣ್ಣ ಬಳಿ ತನ್ನನ್ನು ಮದುವೆಯಾಗುವಂತೆ ಕೇಳಿದ್ದಳು. ಇನ್ನೂ ವಿವಾಹವಾಗದೇ ಇದ್ದ 45 ವರ್ಷದ ಶಂಕರಣ್ಣ ಮೇಘನಾಳನ್ನು ಒಪ್ಪಿ ಮದುವೆಯಾಗಿದ್ದರು. ಆದರೆ ಇದೀಗ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.

Discover more from Valmiki Mithra

Subscribe now to keep reading and get access to the full archive.

Continue reading