ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ಹೋದ ಎರಡೇ ದಿನಕ್ಕೆ ರಾಜ್ಯ ರಾಜಕಾರಣಲದಲ್ಲಿ ಮಹಾ ಕ್ರಾಂತಿ ನಡೆಯಲಿದ್ದು, ಯುಗಾದಿ ಬೆನ್ನಲ್ಲೇ ಕ್ಯಾಬಿನೆಟ್ ಬಿಗ್ ರೀಷಫಲ್ ನಡೆಯಲಿದೆ.
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಚಿವ ಸಂಪುರ ಪುನಾರಚನೆ ಮಾಡಲು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಇದರಂತೆ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಿಂದ 16 ಸಚಿವರ ಔಟ್ ಆಗಲಿದ್ದು, ಹೊಸ ಸಂಪುಟದಲ್ಲಿ 20 ಶಾಸಕರಿಗೆ ಮಂತ್ರಿ ಭಾಗ್ಯ ದೊರೆಯಲಿದೆ.
ಇನ್ನು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದು, ಬೆಳಗಾವಿ ಸಾಹುಕಾರ್ ಗೆ ಸಚಿವ ಸ್ಥಾನ ನೀಡಲು ಎಲ್ಲಾ ತಯಾರಿ ನಡೆದಿದೆ. ಈಗಾಗಲೇ ಹೈಕಮಾಂಡ್ ಸಹ ರಮೇಶ್ ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ ಎಂದು ಬಿಟಿವಿಗೆ ಬಿಜೆಪಿ ಹೈಕಮಾಂಡ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.