ಚಿಕ್ಕಬಳ್ಳಾಪುರ ಜಿಲ್ಲೆ:- ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಸೋಮೇಶ್ವರ ಗ್ರಾಮದ ಸಿ ವೆಂಕಟೇಶ್ ಸ್ವಾಧೀನದಲ್ಲಿರುವ ಮೂರು ಖಾಲಿ ನಿವೇಶನಗಳನ್ನು ಇ ಖಾತೆ ಮಾಡಿಕೊಡುವಂತೆ ಗ್ರಾಂ.ಪ0. ಪ್ರಭಾರಿ ಪಿಡಿಒ ಶ್ರೀನಿವಾಸ್ ಅವರನ್ನು ಹಲವು ಬಾರಿ ಬೇಟಿಮಾಡಿ ದಾಖಲೆ ಪತ್ರಗಳಂತೆ ಖಾತೆ ಮಾಡಿಕೊಡಲು ಅಜಿ೯ಗಳನ್ನು ನೀಡಿದ್ದರು, ಪಿಡಿಒ ಖಾತೆ ಮಾಡಿಕೊಡದೆ ಇಲ್ಲ ಸಲ್ಲದ ಸಬೂಬು ಹೇಳಿಕೊಂಡು ಕಳೆದ ಆಗಸ್ಟ್ ತಿಂಗಳಿನಿ0ದ ಕೆಲಸ ಮಾಡದೆ ಸತಾಯಿಸಿಸುತ್ತಾ ವಿಳಂಬ ಮಾಡುತ್ತಿದ್ದಾ ಕಾರಣ ಚಿಕ್ಕಬಳ್ಳಾಪುರ ಜಿಲ್ಲಾ ಎಸಿಬಿ ಅಧಿಕಾರಿಗಳಿಗೆ ನವೆಂಬರ್ ತಿಂಗಳಲ್ಲಿ ಶ್ರೀನಿವಾಸ್ ಮೇಲೆ ಇ ಖಾತೆ ಮಾಡಲು ಒಂದಕ್ಕೆ ಎರಡು ಸಾವಿರ ಒಟ್ಟು ಆರು ಸಾವಿರ ಲಂಚ ಕೇಳುತ್ತಾರೆಂದು ದೂರು ನೀಡಿದ್ದರು.
ಪಿಡಿಒ ಶ್ರೀನಿವಾಸ್ ಎಂಟು ವರ್ಷಗಳಿಂದ ಸದರಿ ಗ್ರಾ.ಪಂ.ನಲ್ಲಿ ಅಧಿಕಾರವನ್ನು ವಹಿಸಿಕೊಂಡು ಕತ೯ವ್ಯ ನಿವ೯ಹಿಸುತ್ತಿದ್ದರು
ದೂರಿನನ್ವಯ ಕಳೆದವಾರ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುವಾಗ , ಮೋಬೈಲ್ ಸಂಬಾಷಣೆಯಲ್ಲಿ ೪೫೦೦ರೂ ಲಂಚ ಕೇಳಿರುವುದು ಸ್ವಷ್ಟವಾಗಿದ್ದು ಕೂಡಲೇ ಅವರನ್ನ ಅಧಿಕಾರದಿಂದ ಅಮಾನತು ಮಾಡಿ ಪಿಡಿಒ ವೆಂಕಟಾಚಲಪತಿ ಅವರಿಗೆ ಅಧಿಖಾರವನ್ನು ಅಸ್ತಾಂತರಿಸಿದರು .
ವರದಿ : ಆನಂದ್ ಗುಂಡ್ಲುಪೇಟೆ