ತಮಿಳುನಾಡು: ರಾಜ್ಯಸಭಾ ಸಂಸದ ಎನ್‌ಆರ್ ಇಳಂಗೋವನ್ ಅವರ ಪುತ್ರ 22ರ ಹರೆಯದ ರಾಕೇಶ್ ಗುರುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಾಜಿ ಹಿರಿಯ ವಕೀಲರಾದ ಎನ್‌ಆರ್ ಇಳಂಗೋವನ್ ಅವರು 2020 ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾದರು. ಇದು ಅವರ ಮೊದಲ ಅವಧಿಯಾಗಿದೆ. ರಾಜ್ಯಸಭಾ ಸಂಸದ ಮತ್ತು ವಕೀಲ ಎನ್ ಆರ್ ಇಲಂಗೋ ಅವರ ಪುತ್ರ ರಾಕೇಶ್ ರಂಗನಾಥನ್ (21) ಗುರುವಾರ ಮುಂಜಾನೆ ತನ್ನ ಸ್ನೇಹಿತನೊಂದಿಗೆ ಪುದುಚೇರಿಗೆ ತೆರಳುತ್ತಿದ್ದಾಗ ವಿಲ್ಲುಪುರಂ ಜಿಲ್ಲೆಯಲ್ಲಿ ರಸ್ತೆ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಲ್ಲುಪುರಂ ಪೊಲೀಸರ ಪ್ರಕಾರ, ಟಿಎನ್-02-ಸಿಸಿ-1000 ನೋಂದಣಿ ಸಂಖ್ಯೆಯ ವಾಹನವು ಜಿಲ್ಲೆಯ ಗಡಿಭಾಗದ ಕೊಟ್ಟಕುಪ್ಪಂ ಬಳಿಯ ಪೂರ್ವ ಕರಾವಳಿ ರಸ್ತೆಯ ಕೀಜ್‌ಪುತುಪಟ್ಟು ಗ್ರಾಮದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ವಾಹನವು ಅತಿವೇಗದಲ್ಲಿ ಬರುತ್ತಿದ್ದಾಗ, ಹಸುವೊಂದು ಇದ್ದಕ್ಕಿದ್ದಂತೆ ರಸ್ತೆಯನ್ನು ದಾಟಿತು. ಅವರು ಹಸುವಿಗೆ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದರು. ಹೀಗಾಗಿ ಬ್ಯಾಲೆನ್ಸ್ ಕಳೆದುಕೊಂಡರು ಎಂದು ವಿಲ್ಲುಪುರಂ ಜಿಲ್ಲಾ ಪೋಲೀಸರ ಪ್ರಕಟಣೆ ತಿಳಿಸಿದೆ.