ಚಿಕ್ಕಬಳ್ಳಾಪುರ ಜಿಲ್ಲೆಯ ತಹಶೀಲ್ದಾರ್ ಅವರು ಭೂಗಳ್ಳರ ಜೊತೆ ಶಾಮೀಲು ಬಡ ರೈತರರಿಗೆ ಅನ್ಯಾಯ..!?

ಚಿಕ್ಕಬಳ್ಳಾಪುರ: ಜಿಲ್ಲೆಯ ತಹಶೀಲ್ದಾರ್ ಅವರು ಭೂಗಳ್ಳರ ಜೊತೆ ಶಾಮೀಲಾಗಿ ಬಡ ರೈತರ  ಮೇಲೆ  ಅಧಿಕಾರಿ ದಪ೯ವನ್ನು ಎಸಗುತ್ತಿದ್ದಾರೆ ಇದರಿಂದ ರೈತರು ಕಂಗಾಲಾಗಿ ತಹಶೀಲ್ದಾರ್ ಸಿಗ್ಬತುಲ್ಲಾರನ್ನು ವಗಾ೯ವಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಪುಟ್ಟಣ್ಣಯ್ಯ ಬಣದ ರೈತ ಸಂಘಟನೆ ಕಾರ್ಯಕರ್ತರು ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಜಿಲ್ಲಾ ರೈತ ಸಂಘಟನೆ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಇಲ್ಲಿನ ಕಂದಾಯ ಇಲಾಖೆಯಲ್ಲಿ  ಆಕ್ರಮ ಭ್ರಷ್ಟಾಚಾರ ತಾಂಡವವಾಡುತ್ತಿದೆ ಬಡ ರೈತರ ಕೆಲಸಗಳನ್ನು ಅಧಿಕಾರಿಗಳು ಮಾಡದೆ ಭೂಮಾಪೀಯದವರ ಜೋತೆ ಶಾಮೀಲಾಗಿ  ಭೂದಾಖಲೆಗಳನ್ನು ನಾಶ ಪಡಿಸುತ್ತಿದ್ದಾರೆ ಮತ್ತು ಅವರ ಬೆನ್ನಿಗೆ ನಿಂತು ಅವರ ಕೆಲಸಗಳನ್ನು ಮಾಡುತ್ತಿದ್ದಾರೆ ರೈತರು ಅಕ್ರಮ ಸಕ್ರಮದ ಅಡಿಯಲ್ಲಿ ಹಾಕಿಕೊಂಡಿರುವ  52.53.57.ಅರ್ಜಿಗಳನ್ನು ಇತ್ಯಥ೯ಪಡಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕಿನಾದ್ಯಂತ  ಎಗ್ಗಿಲ್ಲದೆ ರೀಯಲ್ ಎಸ್ಟೇಟ್ ನವರು ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮಿನುಗಳನ್ನು ಪರಭಾರೆ ಮಾಡುತ್ತಿದ್ದಾರೆ.

ತಹಶೀಲ್ದಾರ್ ರವರು ಸ್ಥಳೀಯರಾಗಿದ್ದು, ಇಷ್ಟೇಲ್ಲಾ ಆಕ್ರಮಗಳು ನಡೆಯಲು ಕಾರಣ ರೈತರು ಭೂದಾಖಲೆಗಳಲ್ಲಿ ಕಂಡು ಬಂದಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಕಚೇರಿಗೆ ಪ್ರತಿದಿನ ಅಲೆದಾಡಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅದ್ದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ತಹಶೀಲ್ದಾರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನೆಯ ಸ್ಥಳಕ್ಕೆ ಉಪವಿಭಾಗಧಿಕಾರಿ ಸಂತೋಷ್ ಕುಮಾರ್ ಆಗಮಿಸುತ್ತಿದ್ದಂತೆ ಪ್ರತಿಭಟನಕಾರರು ಅಧಿಕಾರಿಗಳು ವಿರುದ್ದ ಕೆಂಡಾಮಂಡಲರಾದರು. ರೈತರು ಆಗುತ್ತಿರುವ ತೋಂದರೆ ಬಗ್ಗೆ  ಎಲೆ ಎಲೆ ಯಾಗಿ ಬಿಚ್ಚಿಟ್ಟು ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಂತೋಷ್ ಕುಮಾರ್ ಮನವಿ ಪತ್ರದಲ್ಲಿ ರುವ  ಹತ್ತು  ಬೇಡಿಕೆಗಳನ್ನು ಈಡೇರಿಸಲು ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿ ಆಕ್ರೋಶಗೋಂಡಿದ್ದ ರೈತರನ್ನು ಮುನವಳಿಸಿದರು ಸ್ಥಳಕ್ಕೆ ಪೊಲೀಸ್ ಆರಕ್ಷಕ ವೃತ್ತನೀರಿಕ್ಷಕ  ಲಿಂಗರಾಜು, ತಹಶೀಲ್ದಾರ್ ಸಿಗ್ಬತುಲ್ಲಾ ಇದ್ದರು.

Discover more from Valmiki Mithra

Subscribe now to keep reading and get access to the full archive.

Continue reading