ಬೆಂಗಳೂರು: ಇಷ್ಟರಲ್ಲೇ ಇವರೆಲ್ಲರ ಬಹು ದೊಡ್ಡ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಯಾರೊಂದಿಗೂ ರಾಜಿಯಾಗಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದರು.
ಈಗಿನ ವ್ಯವಸ್ಥೆಗಳನ್ನ ಬದಲಾವಣೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಕ್ರಾಂತಿಯಾಗಲಿದೆ ಯವಕರಿಗೆ ಆಯ್ಕೆ ಬಿಟ್ಟಿದ್ದೇನೆ. ನೀಟ್ ಪರೀಕ್ಷೆಯ ಬಗ್ಗೆ ನಮ್ಮ ರಾಜ್ಯದವರೇ ಆದ ಕೇಂದ್ರ ಮಂತ್ರಿಗಳು ವಿದೇಶಗಳಿಗೆ ವ್ಯಾಸಂಗ ಮಾಡಲು ಹೋದ ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಸಣ್ಣತನದಿಂದ ಮಾತನಾಡಿದ್ದಾರೆ. ನೀಟ್ ಪರೀಕ್ಷೆಯ ಹೆಸರಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ ಕೋಚಿಂಗ್ ಮಾಫಿಯಾ ಇದೆ. ನನ್ನ ಬಳಿಗೆ ಪ್ರತಿದಿನ ಅದೆಷ್ಟೋ ಬಡ ವಿದ್ಯಾರ್ಥಿಗಳು ಸಹಾಯ ಕೇಳಿಕೊಂಡು ಬರುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ಯಾವ ರೀತಿ ದಂಧೆ ನಡೆಯುತ್ತದೆ ಎಂದು ನನಗೆ ಗೊತ್ತಿದೆ. ಖಾಸಗಿ ಕಾಲೇಜುಗಳ ಫೀ ಸ್ಡ್ರಕ್ಷರ್ ನಿಗದಿ ಪಡಿಸುವಾಗ ಯಾವ ರೀತಿ ಹಣ ಲೂಟಿ ಮಾಡುತ್ತಾರೆ ಎಂದೂ ಗೊತ್ತಿದೆ ಎಂದರು
ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ ಅವರು ಬಜೆಟ್ ಘೋಷಣೆ ಮಾಡ್ತಾರೆ, ಆದರೆ ಎಷ್ಟರ ಮಟ್ಟಿಗೆ ಜಾರಿಯಾಗಲಿದೆ ಎಂದು ವಿಶ್ವಾಸ ಇಲ್ಲ. ಜಾಹೀರಾತುಗಳಲ್ಲಿ ಮಾತ್ರ ಹೊಸ ಯೋಜನೆಗಳ ಹೆಸರು ತೋರಿಸುತ್ತಾರೆ. ಕೇಂದ್ರ ಸರ್ಕಾರ ಮಾಡಿಕೊಂಡು ಬಂದಿರುವುದನ್ನ ಇವರು ಮುಂದುವರೆಸಿದ್ದಾರೆ. ಬೊಮ್ಮಾಯಿರವರು ನೀರಾವರಿ ಸಚಿವರಾಗಿದ್ದರು, ಗೃಹ ಸಚಿವರಾಗಿದ್ದರು. ಈಗ ಸಿಎಂ ಆಗಿದ್ದಾರೆ, ಅವರು ಅನುಭವಿಗಳು. ನಾವು ಅವರಿಗೆ ಸಲಹೆ ನೀಡುವಷ್ಟು ಅನುಭವಸ್ಥ ಅಲ್ಲ ಎಂದು ಹೇಳಿದ್ದರು..