ರಡ್ದೆರಹಟ್ಟಿ : ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಗ್ರಾಮ ಸಭೆ ಕೊರಂ ಕೊರತೆಯಿಂದ ಸಭೆಯನ್ನು ಮುಂದುಡಲಾಯಿತು.
ಬಸವ ವಸತಿ ಯೋಜನೆಯ 30 ಮನೆಗಳು ಬಂದಿದ್ದವು ಎಸ್ಟಿ 2 ಎಸ್ಸಿ 5 ಅಲ್ಪಸಂಖ್ಯಾತರ 3 ಜನರಲ್ 20 ಮನೆಗಳು ಬಂದಿದ್ದವು ಆಯ್ಕೆ ಮಾಡುವ ವಿಷಯ ಈ ಸಭೆಯಲ್ಲಿ ಗ್ರಾಮಸ್ಥರಿಗೆ ಗ್ರಾಮಸಭೆಯ ಒಂದುವಾರ ಮುಂಚಿತವಾಗಿ ಡಂಗುರು ಮಾಹಿತಿ ನೀಡಬೇಕಾದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು ಬುಧವಾರ ರಾತ್ರಿ 8 ಗಂಟೆಗೆ ಡಂಗುರ ಸಾರಿ ಗುರುವಾರ ಬೆಳಗ್ಗೆ 11 ಗಂಟೆಗೆ ಗ್ರಾಮ ಸಭೆ ನಡೆಸುವುದು ತಿಳಿಸಿದರು.
ರಡೇರಹಟ್ಟಿ ಗ್ರಾಮದಲ್ಲಿ ಆರು ಸಾವಿರ ಜನಸಂಖ್ಯೆಯುಳ್ಳ ಗ್ರಾಮ, ಗ್ರಾಮ ಸಭೆ ನಡೆಸಿದಾಗ ಕೋರಂ ಪ್ರಕಾರ 100ಮಾತ್ರ ಇರುವುದಿಲ್ಲ ಎಂದು ಕಂಡುಬಂದಾಗ ವಾಲ್ಮೀಕಿ ಸಮಾಜ ಹಿರಿಯ ಮುಖಂಡರಾದ ರಘುನಾಥ ನಡುವಿನಮನಿ 70 ಜನವಿರುತ್ತಾರೆ ಬೇಸರ ವ್ಯಕ್ತಪಡಿಸಿದರು.
ಈಗ ಗ್ರಾಮ ಸಭೆ ಬಗ್ಗೆ ಯಾರಿಗೆ ಮಾಹಿತಿ ಇರುವುದಿಲ್ಲ ಎಂದು ನನ್ನ ಊರಿನಲ್ಲಿ 40%ರಷ್ಟು ಬಡಜನರ ಇರುತ್ತಾರೆ ಗ್ರಾಮದ ಎಲ್ಲಾ ಜನರಿಗೆ ಮಾಹಿತಿ ನೀಡದೆ ಈಗ ಗ್ರಾಮಸಭೆ ನಡೆಸಿ ಯಾವ್ಯಾವ ಫಲಾನುಭವಿಗಳಿಗೆ ಎಷ್ಟು ಬಂದಿದೆ ಎಂದು ಪ್ರಶ್ನೆ ಮಾಡಿದರು.
ಈ ಗ್ರಾಮಸಭೆಯನ್ನು ಮುಂದುವರಿಸಿದರೆ ಮುಂದಿನ ದಿನಮಾನಗಳಲ್ಲಿ ಗ್ರಾಮ ಪಂಚಾಯಿತಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಆಗ ನೋಡಲ್ ಅಧಿಕಾರಿಗಳಾದ ಪಶುಸಂಗೋಪನೆ ಇಲಾಖೆ ಅಥಣಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಹುಡ್ಡೇಕರ ಈ ಸಭೆಯಲ್ಲಿ ಮಧ್ಯಪ್ರವೇಶಿಸಿ ಸಭೆಯನ್ನು ಮುಂದೂಡಲಾಯಿತು ಬುದುವಾರ 8/3/2022 ನಡೆಸಲು ನಡೆಸಲಾಗುವುದೆಂದು ತಿಳಿಸಿದರು. ನೆರೆದಿದ್ದ ಜನರು ಎದ್ದು ಹೊರಟು ಹೋದರು.
ರಡೇರಹಟ್ಟಿ ಗ್ರಾಮಸ್ಥರು ರಘುನಾಥ ನಡುವಿನಮನಿ ಮಾದೇವ ಮಾದಿ, ಹನುಮಾನ ಚಿಗರಿ,ಲಕ್ಕಪ್ಪ ನಾಯಕ ಸಾಬು ಹುಲ್ಯಾಳ, ವೆಂಕಟೇಶ ಬೋವಿ,ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರು ಬಸವ್ವಾ ನಾಯಕ,ಉಪಾಧ್ಯಕ್ಷರಾದ ಪಾಂಡು ಬೋಸುಲೆ,ಬಾಬು ಹುಲ್ಯಾಳ, ಸುವರ್ಣ ಮಡಿವಾಳ, ಭಾರತಿ ಗಸ್ತಿ, ಶ್ರೀಶೈಲ ಹಾವರೆಡ್ಡಿ ಇನ್ನುಳಿದ ಮುಂತಾದವರಿದ್ದರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ಫೋಳಗೆ ರಘುನಾಥ ನಡುವಿನಮನಿ,ಮಾದೇವ ಮಾದಿ ತರಾಟೆಗೆ ತೆಗೆದುಕೊಂಡರು ಇನ್ನಾದರೂ ಗ್ರಾಮ ಸಭೆಯನ್ನು ನಡೆಸುವ ಮುಂಚಿತವಾಗಿ ಡಂಗುರ ಹೊಡೆಯಿರಿ ಎಂದು ಸಲಹೆ ನೀಡಿದರು.