ಕೆಜಿಎಫ್: ಚಾಪ್ಟರ್ 2′ ಸಿನಿಮಾಕ್ಕಾಗಿ ಇಡೀ ಭಾರತವೇ ಎದುರು ನೋಡುತ್ತಿದೆ. ‘ರಾಕಿಂಗ್ ಸ್ಟಾರ್’ ಯಶ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಸಿನಿಮಾ ‘ಕೆಜಿಎಫ್: ಚಾಪ್ಟರ್ 1’. ಇದೀಗ ‘ಕೆಜಿಎಫ್: ಚಾಪ್ಟರ್ 2’ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
ಈ ಮಧ್ಯೆ ‘ಕೆಜಿಎಫ್ 2’ ಟ್ರೇಲರ್ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಹಲವರಲ್ಲಿ ಇತ್ತು. ಇದೀಗ ಅದಕ್ಕೂ ಉತ್ತರ ಸಿಕ್ಕಿದ್ದು, ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿದೆ.
ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಟ್ರೇಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ. ‘ಯಾವಾಗಲೂ ಕೂಡ ಮಿಂಚು ಬರುವ ಮುನ್ನ ಗುಡುಗು ಬರುತ್ತದೆ..’ ಎಂದು ಟ್ರೇಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಚಿತ್ರತಂಡ.