ದೇವದುರ್ಗ: ಪಟ್ಟಣದ ಹಳ್ಳದರಾಯನದೊಡ್ಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಯಿತು. ವಾರ್ಡ್ ನಂ.20ರ 12 ದೊಡ್ಡಿಗಳಿಗೆ ಕುಡಿಯುವ ನೀರು ಒದಗಿಸಲು 5.81 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
ಶಂಭುಲಿಂಗಯ್ಯ ಬೆಟ್ಟದ ಬಳಿಯ ಜಲ ಶುದ್ಧೀಕರಣ ಘಟಕದಿಂದ ಪೈಪ್ ಲೈನ್ ಮೂಲಕ ಹಳ್ಳದರಾಯನದೊಡ್ಡಿಗೆ ನೀರು ಸರಬರಾಜು ಆಗಲಿದೆ. ಮೇಲಂತಸ್ತಿನ ಟ್ಯಾಂಕ್’ನಲ್ಲಿ ನೀರು ಸಂಗ್ರಹವಾಗಿ ಪೈಪ್ ಲೈನ್ ಮೂಲಕ 12 ದೊಡ್ಡಿಗಳ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಆಗಲಿದೆ.
• ಹಳ್ಳದರಾಯನದೊಡ್ಡಿ
• ಮಡ್ಲೇರದೊಡ್ಡಿ
• ಗೂಗೇರದೊಡ್ಡಿ
• ಗುಂಡದವರದೊಡ್ಡಿ
• ಗಾಲೇರದೊಡ್ಡಿ
• ದಳೇರದೊಡ್ಡಿ
• ಕಾಳೇರದೊಡ್ಡಿ
• ಜಕ್ಲರದೊಡ್ಡಿ
• ಮಟ್ಲರದೊಡ್ಡಿ
• ನಗರರದೊಡ್ಡಿ
• ಗಾಂಜರದೊಡ್ಡಿ
• ಮಜ್ಗೇರದೊಡ್ಡಿ
• ಹಾವ್ಲರದೊಡ್ಡಿ
ಈ ಮೇಲಿನ ಎಲ್ಲಾ ದೊಡ್ಡಿಗಳ ಪ್ರತಿ ಮನೆಗಳಿಗೂ ನಲ್ಲಿ ಮೂಲಕ ದಿನದ ಇಪ್ಪತ್ನಾಲ್ಕು ಗಂಟೆ ಕುಡಿಯುವ ನೀರು ಸರಬರಾಜು ಆಗಲಿದೆ.