ತುಮಕೂರು: ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಘಟಕದ ಚುನಾವಣೆಯಲ್ಲಿ ಜಿಲ್ಲಾ ನಿರ್ದೇಶಕ ಸ್ಥಾನಕ್ಕೆ ನಿಂತಿದ್ದ ಪ್ರಜಾಮನ ಕನ್ನಡ ದಿನಪತ್ರಿಕೆ ಸಂಪಾದಕ ಟಿ.ಎಸ್.ಕೃಷ್ಣಮೂರ್ತಿ 228 ಮತಗಳಿಂದ ಪತ್ರಕರ್ತರ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಇವರು ಗ್ರಾಮೀಣ ಭಾಗದ ಒಂದು ಪುಟ್ಟ ಹಳ್ಳಿ ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮದಿಂದ ಬಂದು ಪತ್ರಿಕಾ ಕ್ಷೇತ್ರದಲ್ಲಿ ಜಿಲ್ಲಾ ವರದಿಗಾರ, ಅಂಕಣಕಾರ, ಪುಟ ವಿನ್ಯಾಸಕ, ಸಂಪಾದಕ, ಹೀಗೆ ಪತ್ರಿಕಾರಂಗದ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ ಅಲ್ಲಿನ ನೋವು-ನಲಿವುಗಳನ್ನು ಖುದ್ದಾಗಿ ಕಂಡು ಅನುಭವಿಸಿದ್ದಾರೆ. ಕಳೆದ 15 ವರ್ಷಗಳಿಂದ ತುಮಕೂರು ಪತ್ರಿಕಾ ರಂಗದಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುತ್ತಾ,ನೂರಾರು ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ತನ್ನ ಜೊತೆಯಲ್ಲೇ ಅವರನ್ನು ಬೆಳೆಸುತ್ತ ತಾನು ಬೆಳೆಯುತ್ತಾ ಸಾಗುತ್ತಿದ್ದಾರೆ.
ಇಂದು ಜಿಲ್ಲೆಯಲ್ಲಿರುವ ಎಷ್ಟೊ ಯುವ ಪತ್ರಕರ್ತರು, ಸಂಪಾದಕರು ಅವರ ಗರಡಿಯಿಂದಲೇ ಬಂದವರಾಗಿದ್ದಾರೆ. ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ,ಪತ್ರಕರ್ತರ ಸಮಗ್ರ ಧ್ವನಿಯಾಗಿ ಸ್ಪಂದಿಸಲು, ಅವರ ಭವಿಷ್ಯಕ್ಕೆ ಭದ್ರ ಬುನಾದಿಯಾಗುವಂಥಾ ಶಾಶ್ವತ ಯೋಜನೆಗಳ ಬಗ್ಗೆ ಆಶಯಹೊತ್ತಿರುವ ಇಂಥವರನ್ನು ಆಯ್ಕೆ ಮಾಡಿದ ಪತ್ರಕರ್ತ ಮತದಾರರಿಗೆ ಧನ್ಯವಾದ ಹೇಳಲೇಬೇಕು.
ಹಿರಿಯರು, ಕಿರಿಯರು ಎಂಬ ಬೇದವಿಲ್ಲದೆ ಸಂಪಾದಕನೆಂಬ ಅಹಂ ಇಲ್ಲದೆ ಎಲ್ಲರೊಂದಿಗೂ ಸ್ನೇಹದಿಂದಲೇ ನಗು ಮೊಗದಿಂದಲೇ ಮಾತಾನಾಡುವ ಸ್ನೇಹ ಜೀವಿ, ಅವರ ಗೆಲುವಿಗೆ ಅವರ ನಗುಮೊಗವು ಒಂದು ಕಾರಣ, ಅವರ ಜೊತೆ ಮಾತಾಡುತ್ತಿದ್ದಾರೆ ಮತ್ತಷ್ಟು ಅವರ ಜೊತೆ ಮಾತಾಡುವ ಹಂಬಲ ಹೆಚ್ಚಾಗುತ್ತೇ, ಅಪರಿಚಿತರನ್ನು ಪರಿಚಿತರನ್ನಾಗಿ ಮಾಡಿಕೊಂದು ಸ್ನೇಹ ಬೆಳೆಸಿಕೊಳ್ಳುವ ವ್ಯಕ್ತಿ ಟಿ.ಎಸ್.ಕೃಷ್ಣಮೂರ್ತಿರವರು ಪತ್ರಿಕಾಕ್ಷೇತ್ರ ಹಾಗೂ ನಾನಾ ಕ್ಷೇತ್ರದಲ್ಲಿ ಹಲವರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಯಾವುದೇ ಪ್ರಚಾರ ಮಾಡದೇ ತನ್ನಷ್ಟಕ್ಕೆ ತಾನು ಕಾಯಕ ಮಾಡುತ್ತಿದ್ದಾರೆ, ಇಂದು ಟಿ.ಎಸ್.ಕೃಷ್ಣಮೂರ್ತಿಯವರ ದೈತ್ಯಶಕ್ತಿ ಸಮಾಜದ ಮುಂದೆ ಅನಾವರಣಗೊಂಡಿದೆ, ಟಿ.ಎಸ್.ಕೃಷ್ಣಮೂರ್ತಿರನ್ನು ಸ್ನೇಹಿತರು ಪ್ರೀತಿಯಿಂದ ತೋಸಿ ಎಂದು ಕರೆಯುತ್ತಾರೆ ಆಂಜನೇಯನಿಗೆ ಇರುವಷ್ಟು ಶಕ್ತಿಯಿದ್ದರು ಏನು ಗೊತ್ತಿಲ್ಲದ ರೀತಿ ತನ್ನ ಪಾಡಿಗೆ ತಾನು ಇರುವ ವ್ಯಕ್ತಿ, ಶತ್ರುಗಳನ್ನು ಮಿತ್ರರನ್ನಾಗಿ ಮಾಡಿಕೊಳ್ಳುವ ಸ್ನೇಹಜೀವಿ ಇಂತವರಿಗೆ ಇನ್ನು ಹೆಚ್ಚಿನ ಸ್ಥಾನಮಾನಗಳು ಸಿಗುತ್ತಾಹೋಗಬೇಕು ಅವರ ಯಶಸ್ಸಿನ ಪಯಣ ಮುಂದುವರೆಯುತ್ತಲೇ ಇರಲಿ ಒಬ್ಬ ಸಜ್ಜನ ಪತ್ರಕರ್ತನನ್ನು ಬಹುಮತಗಳಿಂದ ಆಯ್ಕೆ ಮಾಡಿದ ತುಮಕೂರು ಜಿಲ್ಲೆಯ ಎಲ್ಲ ಪತ್ರಕರ್ತರಿಗೆ ನಮ್ಮ ಪತ್ರಿಕಾ ಬಳಗದಿಂದ ಅಭಿನಂದಿಸುತ್ತೇವೆ.