ಉಕ್ರೇನ್ ನಿಂದ ವಿದ್ಯಾರ್ಥಿಗಳು ಕಳುಹಿಸಿರುವ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಕರುಣಾಜನಕ ಸ್ಥಿತಿಯಲ್ಲಿರುವ ಭಾರತೀಯರನ್ನು ನೋಡಲು ಹಿಂಸೆಯಾಗುತ್ತಿದೆ ಎಂದಿದ್ದಾರೆ.
ಹಿಂಸಾಚಾರದಿಂದ ಬಳಲುತ್ತಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬದವರನ್ನು ನೋಡಲು ಮುಜುಗರವಾಗುತ್ತಿದೆ. ಯಾವುದೇ ಪೋಷಕರಿಗೂ ಈ ಸ್ಥಿತಿ ಬರಬಾರದು. ಉಕ್ರೇನ್ ನಲ್ಲಿ ಸಿಕ್ಕಿಬಿದ್ದವರ ಸ್ಥಳಾಂತರವನ್ನು ಚುರುಕುಗೊಳಿಸಿ. ನಾವು ನಮ್ಮ ಸ್ವಂತ ಜನರನ್ನು ತ್ಯಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈವರೆಗೂ ಐದು ವಿಮಾನಗಳಲ್ಲಿ ಪ್ರಯಾಣಿಕರನ್ನು ಕರೆ ತರಲಾಗಿದೆ. ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂಕಷ್ಟದಲ್ಲಿದ್ದವರನ್ನು ನೆರೆಯ ರಾಷ್ಟ್ರಗಳಿಗೆ ಸ್ಥಳಾಂತರ ಮಾಡಿ ಸುರಕ್ಷತೆ ಖಾತ್ರಿ ನೀಡಬೇಕು ಎಂಬ ಸಲಹೆಗಳನ್ನು ಕಾಂಗ್ರೆಸ್ ನ ಹಲವು ನಾಯಕರು ನೀಡಿದ್ದಾರೆ.