ಮೈಸೂರು: ವಾರ್ಡ್ ನಂ. 28ರ ಪಾಲಿಕೆ ಸದಸ್ಯರೊಬ್ಬರು ಅಧಿಕಾರಿ ನೌಕರರಿಗೆ ಕರ್ತವ್ಯದ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ವಲಯ ಕಛೇರಿ-7 ಕ್ಕೆ ಒಳಪಡುವ ವಾರ್ಡ್ ನಂ. 28ರಲ್ಲಿ ಆರೋಗ್ಯ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಿ. ಜಯಂತಿರವರಿಗೆ ವಾರ್ಡ್ ನಂ. 28ರ ಪಾಲಿಕೆ ಸದಸ್ಯರಾದ ಅಶ್ವಿನಿ ಶರತ್ ರವರು ದೂರವಾಣಿ ಮೂಲಕ ಕರೆ ಮಾಡಿ ವಾರ್ಡಿನ ಪೌರಕಾರ್ಮಿಕರ ಹಾಜರಾತಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿರುತ್ತಾರೆ.
ಅದರಂತೆ, ಶ್ರೀಮತಿ ಪಿ. ಜಯಂತಿ ರವರು 2 ವಾರ್ಡ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ 26ನೇ ವಾರ್ಡಿನ ಪ್ರಭಾರವಿರುವುದರಿಂದ 26ನೇ ವಾರ್ಡ್ನಲ್ಲಿ ಪೌರಕಾರ್ಮಿಕರ ಹಾಜರಾತಿ ಸ್ಥಳದಲ್ಲಿ ಇದ್ದು, ನಂತರ ವಾರ್ಡಿಗೆ ಬರುವುದಾಗಿ ತಿಳಿಸಿ ಬೆಳಿಗ್ಗೆ 6 :30 ಕ್ಕೆ ವಾರ್ಡ್ ನಂ. 28ರ ಹಾಜರಾತಿ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ವಾರ್ಡಿನ ಸ್ಯಾನಿಟರಿ ಸೂಪರ್ ವೈಸರ್ ಆದ ಶ್ರೀ ಡಿ ಲಿಂಗಯ್ಯ ರವರು ಹೇಳಿದ ಹಾಗೆ ಕೇಳಿಕೊಂಡು ಕರ್ತವ್ಯ ನಿರ್ವಹಿಸಬೇಕೇ ಹೊರತು ಬೇರೇನು ಕರ್ತವ್ಯ ನಿರ್ವಹಿಸದಂತೆ ಸೂಚಿಸಿರುತ್ತಾರೆ. ನಂತರ ನನ್ನ ವಾರ್ಡ್ಗೆ ಆರೋಗ್ಯ ನಿರೀಕ್ಷಕರು ಅವಶ್ಯಕತೆ ಇಲ್ಲ, ಇನ್ನು ಮುಂದೆ ವಾರ್ಡಿಗೆ ಬರಬಾರದೆಂದು ಸಾರ್ವಜನಿಕ ಸ್ಥಳದಲ್ಲಿ ಪೌರಕಾರ್ಮಿಕರ ಮುಂದೆಯೇ ಪಿ. ಜಯಂತಿ ಅವರಿಗೆ ಅವಾಚ್ಯ ಶಬ್ದಗಳಿಂದ ಅಶ್ವಿನಿ ಶರತ್ ನಿಂದಿಸಿದ್ದಾರೆ.
ಈ ರೀತಿಯ ವರ್ತನೆ ಹಲವಾರು ಬಾರಿ ನಡೆದಿದ್ದು, ಮಾನಸಿಕವಾಗಿ ನೊಂದು ಕರ್ತವ್ಯ ನಿರ್ವಹಿಸಲು ಬಹಳ ಕಷ್ಟವಾಗುತ್ತಿದೆ ಹಾಗೂ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೂ ಸಹ ತಂದಿರುತ್ತೇನೆ ಎಂದು ಪಿ. ಜಯಂತಿ ಹೇಳಿದ್ದಾರೆ.
ಇನ್ನೂ ಈ ವಿಚಾರವಾಗಿ ಎಲ್ಲಾ ಅಧಿಕಾರಿ / ಸಿಬ್ಬಂದಿಗಳು ಸ್ಥಳದಲ್ಲಿದ ಪ್ರತಿಭಟನೆ ಕೈಗೊಂಡಿದ್ದಾರೆ, ಆಯುಕ್ತರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರನ್ನು ಕರೆದು ವಿಚಾರಣೆ ನಡೆಸುತ್ತಿರುವ ವೇಳೆ ಏಕಾಏಕಿಯಾಗಿ ಅಶ್ವಿನಿ ಶರತ್ ಅಲ್ಲಿಯೂ ಸಹ ಬಂದು ವಾಗ್ವಾದಕ್ಕಿಳಿದು ನನ್ನ ಸಿಬ್ಬಂಧಿಯ ಹಾಜರಾತಿ ತೆಗೆದುಕೊಳ್ಳಲು ಇವರು ಯಾರು ಎಂದು ಆರೋಗ್ಯ ನಿರೀಕ್ಷಕರನ್ನು ಪ್ರಶ್ನಿಸಿರುತ್ತಾರೆ. ಈ ರೀತಿಯ ವರ್ತನೆಯಿಂದ ಮುಜುಗರಗೊಂಡ ವಲಯ ಆಯುಕ್ತರು ತಮ್ಮ ಕಛೇರಿಯಿಂದ ಎದ್ದು ಹೊರನಡೆದರು.
ಇದೇ ರೀತಿ ಹಲವಾರು ವಾರ್ಡ್ಗಳಲ್ಲಿ ಪಾಲಿಕೆ ಸದಸ್ಯರುಗಳಿಂದ ಆರೋಗ್ಯ ನಿರೀಕ್ಷಕರುಗಳು ನಿಂದನೆಗೆಗೊಳಗಾಗಿರುವ ಪ್ರಕರಣಗಳು ನಡೆದಿರುತ್ತವೆ. ಸರ್ಕಾರಿ ಕೆಲಸ ನಿರ್ವಹಿಸಿರುವ ನೌಕರರಿಗೆ ರಕ್ಷಣೆ ಮತ್ತು ನ್ಯಾಯ ದೊರಕಿಸಿಕೊಡಬೇಕಾಗಿದೆ.