ದಾವಣಗೆರೆ: ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ತಾಲೂಕು ದಂಡಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯ ವರು ಈಗಾಗಲೇ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪರಿಶಿಷ್ಟ ಪಂಗಡದವರಿಗೆ ಸಂವಿಧಾನಾತ್ಮಕವಾಗಿ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ಸರ್ಕಾರಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಪರಮಪೂಜ್ಯರ ಬೇಡಿಕೆಯನ್ನು ಬೆಂಬಲಿಸಿ ದಿನಾಂಕ-21-02-2022 ಸೋಮವಾರ ಬೆಳಿಗ್ಗೆ 11-30 ಕ್ಕೆ ಚನ್ನಗಿರಿ ತಾಲ್ಲೂಕು ನಾಯಕ ಸಮಾಜ ಸರ್ಕಾರದ ಗಮನ ಸೆಳೆಯುವ ಸಲುವಾಗಿ ವಾಲ್ಮೀಕಿ ಸಮುದಾಯ ಭವನದಿಂದ ಕಾಲ್ನಡಿಗೆ ಮುಖಾಂತರ ತಮ್ಮ ಕಛೇರಿಗೆ ನೇರವಾಗಿ ಆಗಮಿಸಿ ಸರ್ಕಾರಕ್ಕೆ ತಮ್ಮ ಮುಖೇನ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ ದಯವಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರು ಹೊದಿಗೆರೆ ರಮೇಶ್ ಕೋರಿಕೊಂಡಿದ್ದಾರೆ.