ರಾಜೀನಾಮೆ ಕೊಡುವ ತಪ್ಪನ್ನು ಈಶ್ವರಪ್ಪ ಏನು ಮಾಡಿದ್ದಾರೆ? – ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ರಾಜೀನಾಮೆ ಕೊಡುವ ತಪ್ಪನ್ನು ಈಶ್ವರಪ್ಪ ಏನು ಮಾಡಿದ್ದಾರೆ? ತಪ್ಪು ಮಾಡಿದ್ರೆ ಅವರೇ ರಾಜೀನಾಮೆ ಕೊಡ್ತಾರೆ. ಅವರ ವಿರುದ್ಧ ಯಾಕೇ ದೇಶದ್ರೋಹ ಕೇಸ್ ಹಾಕಬೇಕು ಎಂದು ಗೃಹ ಸಚಿವರು ಅರಗ ಜ್ಞಾನೇಂದ್ರ ಕಾಂಗ್ರೆಸ್ ವಿರುದ್ಧ ಕಿಡಿ ಕಾರುವ ಮೂಲಕ, ಈಶ್ವರಪ್ಪನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ದೇಶದ್ರೋಹದ ಕೇಸ್ ಇವರ ವಿರುದ್ಧವೇ ಹಾಕಬೇಕು. ಯಾಕೆಂದರೆ ಸದನದ ಒಳಗೆ ರಾಷ್ಟ್ರಧ್ವಜ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಇವರೇ ರಾಷ್ಟಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದರು. ಹಿಜಾಬ್ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ, ಬಿಸಿ ತುಪ್ಪವಾಗಿದೆ. ಇದರಿಂದ ಹೊರ ಬರಲು ಈಶ್ವರಪ್ಪ ಜಪ ಮಾಡ್ತಿದ್ದಾರೆ. ಕಾಂಗ್ರೆಸ್ ನವರು ಯಾವ ಹೋರಾಟ ಮಾಡಿದ್ರೂ ಸರಿಯೇ ನಾವಂತೂ ಯಾವುದಕ್ಕೂ ಜಗ್ಗುವುದಿಲ್ಲ.ಆದರೆ ಅವರು ಸುಮ್ಮನೆ ಸದನದ ಸಮಯ ಹಾಳು ಮಾಡ್ತಿದ್ದಾರೆ ಇದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು. ಕಾಂಗ್ರೆಸ್ ಏನು ಮಾಡಿದರೂ ನಾವಂತೂ ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸೂ ಹಾಕಲ್ಲ, ರಾಜೀನಾಮೆಯೂ ಕೊಡಿಸಲ್ಲ ಎಂದ ಹೇಳಿದರು.

ಸಚಿವರ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಈಶ್ವರಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಯ್ತು. ಈ ವೇಳೆ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಮನೋಹರ್, ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾ ಮಾಡಬೇಕು. ಸದನದಲ್ಲಿ ಅವರ ವರ್ತನೆ ಸರಿಯಿಲ್ಲ. ಏಕವಚನದಲ್ಲಿ ಈಶ್ವರಪ್ಪ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

Discover more from Valmiki Mithra

Subscribe now to keep reading and get access to the full archive.

Continue reading