ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆಗೊಳಿಸಲು ಹಾಗೂ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿಯವರ ಧರಣಿ ಸತ್ಯಾಗ್ರಹದಲ್ಲಿ ಇಂದು ಮಾನ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಧುಗಿರಿ ಜನಪ್ರಿಯ ಮಾಜಿ ಶಾಸಕರು ಆದ ಶ್ರೀ ಕೆ.ಎನ್.ರಾಜಣ್ಣನವರು ಭಾಗವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮೈಸೂರು ಜಿಲ್ಲೆಯ ಮುಖಂಡ ಅಪ್ಪಣ್ಣ, ಜಿ.ಆರ್.ರವಿ ಹಾಗೂ ಶ್ರೀಮತಿ ರಶ್ಮೀಗಿರೀಶ್ ಮತ್ತಿತರರು ಹಾಜರಿದ್ದರು.