ತುಮಕೂರು: 2007ರಲ್ಲಿ ನವಯುಗ ಇಂಜಿನಿಯರಿಂಗ್ ಕಂಪನಿಯಿಂದ ಕಾಮಗಾರಿ ಶುರುವಾಗಿ 2010ರಲ್ಲಿ ಉದ್ಘಾಟನೆಗೊಂಡ ತುಮಕೂರು ರಸ್ತೆಯ ಮೇಲ್ಸೇತುವೆ ಇಂದು ಶಿಥಿಲಾವಸ್ಥೆ ತಲುಪಿದೆ.
ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡ ನವಯುಗ ಕಂಪನಿಯನ್ನು ಈ ಕೂಡಲೇ ಕಪ್ಪುಪಟ್ಟಿಗೆ ಸೇರಿಸಬೇಕೆಂದು ಸಾವಜನಿಕರ ಒತ್ತಾಯ. ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಮತ್ತು ಅಸಮರ್ಪಕ ನಿರ್ವಹಣೆ ಮೇಲ್ನೋಟಕ್ಕೆ ಕಂಡುಬಂದಿದ್ದು ಇದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ. ಇನ್ನು ಮೇಲ್ಸೇತುವೆಯನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಬೇಕಾಗಿರುವ ಕಾರಣ ನಿತ್ಯವೂ ಸಹಸ್ರಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ವರ್ಷಗಟ್ಟಲೆ ಮುಂದುವರಿಯಲಿದೆ.