ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ರಾಜ್ಯ ಸರ್ಕಾರ ಹಿಜಾಬ್ ವಿಚಾರವಾದ ಮುಜಾಗೃತವಾಗಿ ಹೊರಡಿಸಿದ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಅವರ ಮೇಲೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದೆಂದು ತಹಶೀಲ್ದಾರ್ ಸಿಂಗ್ಬತುಲ್ಲಾ ತಿಳಿಸಿದರು.
ಇಂದು ತಾಲ್ಲೂಕಿನಲ್ಲಿ ಈ ಹಿಂದೆ ಹಿಜಾಬ್ ವಿಚಾರವಾಗಿ ಸ್ಥಗಿತಗೊಂಡಿರುವ ಶಾಲೆಗಳನ್ನು ಪುನಾರಾಂಬ ಮಾಡಲು ಇಂದು ವಿವಿಧ ಸರ್ಕಾರಿ ಫ್ರೌಡಶಾಲೆಗಳಿಗೆ ಭೇಟಿ ನೀಡಿ ಶಾಲೆಗಳ ಶಿಕ್ಷಕರೋಂದಿಗೆ ಚಚಿ೯ಸಿ ಶಾಲೆಯ ಸುತ್ತಮುತ್ತಲು ಯಾವುದೇ ತರದ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಶಿಕ್ಷಣ ಇಲಾಖೆ ಹೊರಡಿಸಿರುವ ಸೂತ್ತೋಲೆಯನ್ನು ಪಾಲಿಸಿಕೊಂಡು ತರಗತಿಗಳನ್ನು ನಡೆಸಬೇಕೆಂದು ಆಯಾ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಸೂಚಿಸಿದರು.
ಈ ಸಂಧಭ೯ದಲ್ಲಿ ಶಿಕ್ಷಣ ಇಲಾಖೆಯ ತಾಲ್ಲೂಕು ಸಂಯೋಜಕ ಚಂದ್ರಶೇಖರ ಪೋಲಿಸ್ ಇಲಾಖೆಯ ಮುಖ್ಯ ಪೇದೆ ಶಂಕರೆಡ್ಡಿ ಹಾಜರಿದ್ದರು.