ಚಿಕ್ಕಮಗಳೂರು: ನಗರದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ (ರಿ) ಚಿಕ್ಕಮಗಳೂರು ಜಿಲ್ಲೆ ಸಂಘದ ಪದಾಧಿಕಾರಿಗಳು ಪತ್ರಿಕೆ ಸಂದರ್ಶನದಲ್ಲಿ ಭಾಗವಹಿಸಿದರು.
ಮಹರ್ಷಿ ವಾಲ್ಮೀಕಿ ನಾಯಕ ಯುವಕರ ಸಂಘ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರು ಜಗದೀಶ್ ಕೋಟೆ ಮಾತನಾಡಿ, ಸರ್ಕಾರ ನಮ್ಮ ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆ ಆಧಾರದ ಮೇಲೆ 7.5% ಮೀಸಲಾತಿ ನೀಡಬೇಕು. ನಮ್ಮ ವಾಲ್ಮೀಕಿ ನಾಯಕ ಸಮಾಜ ಮೂವತ್ತು ವರ್ಷಗಳ ಕಾಲದಿಂದ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದೆ ಎಲ್ಲಾ ಸರ್ಕಾರಗಳು ಬರೀ ಭರವಸೆ ನೀಡಿರುತ್ತದೆ . ಮೀಸಲಾತಿ ಹೆಚ್ಚಳ ಮಾಡಿಲ್ಲ, ನಮ್ಮ ವಾಲ್ಮೀಕಿ ಗುರುಪೀಠದ ಗುರುಗಳು ಶ್ರೀ ಶ್ರೀ ಶ್ರೀ ಪ್ರಸನ್ನಾಂದಪುರಿ ಮಹಾಸ್ವಾಮಿಗಳು ದಿನಾಂಕ 09-02-2022 ರಂದು ಶ್ರೀ ಮಠದಲ್ಲಿ ರಾಜ್ಯ ಮಟ್ಟದ ಸಂಘಟನೆಯ ಸಭೆಯಲ್ಲಿ ನಿರ್ಣಾಯ ತೇಗದುಕೂಂಡರು.
ದಿನಾಂಕ 10-02-2022 ರಂದು ವಾಲ್ಮೀಕಿ ಗುರುಗಳ ಪ್ರತಿಮೆ ಮಾಲೆ ಹಾಕಿ ನಂತರ ಡಾ ” ಬಾಬ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ಗೆ ಮಾಲೆಹಾಕಿ ಬೆಂಗಳೂರು ನಗರದ ಪೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ.
ಅದರೆ ಇಲ್ಲಿ ತನಕ ಸರ್ಕಾರವಾಗಲಿ ಸರ್ಕಾರದ ಮಂತ್ರಿಗಳು ಅಲ್ಲಿಗೆ ಬಂದಿಲ್ಲ, ಇದು ನಮ್ಮ ಸಮಾಜಕ್ಕೆ ಕೆರಳಿ ಹೋರಾಟಕ್ಕೆ ಸಜ್ಜಾಗಿದೆ ನಮ್ಮ ಶ್ರಿಗಳ ಆದೇಶಕ್ಕೆ ಸಮಾಜ ಕಾಯುತ್ತ ಇದೆ ಶ್ರೀಗಳ ಆದೇಶ ನೀಡಿದರೇ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡಲು ಕರ್ನಾಟಕದ ರಾಜ್ಯದ ಎಲ್ಲಾ ಸಂಘಟನೆಗಳು ಮತ್ತು ಸಮಾನ ಮನಸ್ಕರು ಈ ಹೋರಾಟಕ್ಕೆ ಬೆಂಬಲ ಸೂಚಿಸಿರುತ್ತಾರೆ.
ಅತಿ ಶೀಘ್ರದಲ್ಲಿ ಸರ್ಕಾರ ಗಮನ ಹರಿಸಿ ಮೀಸಲಾತಿ ಹೆಚ್ಚಳ ಮಾಡಬೇಕು ಅಗ್ರಹಿಸಿದ್ದರು ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷರು ಪ್ರದೀಪ್ ಬಿ.ಆರ್ ಮಾತನಾಡಿ, ಕೆಂದ್ರ ಸರ್ಕಾರ ನಮ್ಮ ಪರಿಶಿಷ್ಟ ಪಂಗಡಕ್ಕೆ 7.5% ಮೀಸಲಾತಿ ನೀಡಿದೆ ಅದರೆ ರಾಜ್ಯ ಸರ್ಕಾರ ನೀಡಲು ಮೀಸಮೇಶ ಮಾಡುತ್ತಿದೆ ದಯಮಾಡಿ ನಮ್ಮ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ 7.5% ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಧುಕುಮಾರ .ತಾಲ್ಲೂಕು ಪ್ರದಾನ ಕಾರ್ಯದರ್ಶಿ ಯತೀಶ ನಾಯಕ. ತಾಲ್ಲೂಕು ಸಂಘಟನೆಯ ಕಾರ್ಯದರ್ಶಿ ಭರತ ಪಾಳೆಯಗಾರ. ತಾಲ್ಲೂಕು ಸಂಚಾಲಕರು ಅನೀಲ್ ಚೌಧರಿ ನಾಯಕ ಹಾಜರಿದ್ದರು.