ವಾಲ್ಮೀಕಿ ಮಹರ್ಷಿ ಒಂದು ಜಾತಿಗೆ ಒಂದು ಸಮುದಾಯದ ನಾಯಕರಲ್ಲ ಅವರು ಎಲ್ಲಾ ವಗ೯ಗಳ ಮಹಾನ್ ಚೇತನ -ಕೆ.ಎಚ್.ಪುಟ್ಟಸ್ವಾಮಿಗೌಡ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರವಾಸಿ ಗೌರಿಬಿದನೂರು ತಾಲ್ಲೂಕು ವಾಲ್ಮೀಕಿ ಮಹರ್ಷಿ ಒಂದು ಜಾತಿಗೆ ಒಂದು ಸಮುದಾಯದ ನಾಯಕರಲ್ಲ ಅವರು ಎಲ್ಲಾ ವಗ೯ಗಳ ಮಹಾನ್ ಚೇತನ ಅವರ ಆದಶ೯ಗಳನ್ನು ಪ್ರತಿಯೋಬ್ಬರು ಜೀವನದಲ್ಲಿ ರೂಡಿಸಿಕೋಳ್ಳಬೇಕೆಂದು ಕೆ.ಎಚ್.ಪೌಡೇಶನ್ ಸಂಸ್ಥಾಪಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.

ಇಂದು ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ತಮ್ಮ ಪೌಡೇಶನ್  ವತಿಯಿಂದ  ಗ್ರಾಮೀಣ ನಿರುದ್ಯೋಗ ಬಡ ಹೆಣ್ಣು ಮಕ್ಕಳು ಸ್ವಯಂ ಉದ್ಯೋಗವನ್ನು ಕಲಿಯಲು ಉಚಿತ ಹೊಲಿಗೆ ತರಬೇತಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಅವರು ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಬಡತನದಿಂದ ಮಕ್ಕಳು ಶಿಕ್ಷಣದಲ್ಲಿ ವಂಚಿತರಾಗುತ್ತಿದ್ದಾರೆ ಆ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವತಿಯಿಂದ ತಾಲ್ಲೂಕಿನಾದ್ಯಂತ ಕಳೆದ ಆರೇಳು ವರ್ಷಗಳಿಂದ ಪ್ರತಿದಿನ ಅಲವು ಸಮಾಜಮುಖಿಯಾದ ಸೇವಾಕಾಯ೯ಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೆವೆ.  ಆಸಕ್ತರು ಈ ತರಬೇತಿ ಕೇಂದ್ರದಲ್ಲಿ  ತರಬೇತಿಯನ್ನು ಪಡೆದವರು ಆಥಿ೯ಕವಾಗಿ  ಸ್ವಾಲಂಬಿ ಬದುಕನ್ನು ಸಾಗಿಸುವಸಲುವಾಗಿ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುವುದು ವಿದ್ಯಾರ್ಥಿ ಯುವಜನರು ಕೆಟ್ಟ ದುಚಟಗಳಿಗೆ ಬಲಿಯಾಗದೆ.

ತಮ್ಮ ಜೀವನದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು  ಇಂತಹ ತರಬೇತಿ ಮತ್ತು ಕೇಂದ್ರಗಳನ್ನು ಗೌರಿಬಿದನೂರು ತಾಲ್ಲೂಕಿನ  ಆರು ಹೊಬಳಿ ಕೇಂದ್ರಗಳಲ್ಲಿ  ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ  ಬಡವರ ಅವರ ಸಂಕಷ್ಟಗಳನ್ನು ಹೋಗಲಾಡಿಸಲುವಾಗಿ ನಮ್ಮ ಫೌಂಡೇಶನ್ ವತಿಯಿಂದ ಶ್ರಮಸಲಾಗುತ್ತಿದೆ ಎಂದು ತಿಳಿಸಿದರು.

ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮಾಜಿ ಉಪ ಅಧ್ಯಕ್ಷರಾದ  ರಾಘವೇಂದ್ರ ಹನುಮಾನ್  ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿದ್ದು ಸಕಾ೯ರ ಮಾಡದ ಬಡವರಿಗೆ ನೆರವಾಗುವ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರು ಕೆ. ಎಚ್. ಪುಟ್ಟಸ್ವಾಮಿಗೌಡರು ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.

ಈ ಕಾಯ೯ಕ್ರಮದಲ್ಲಿ  ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್. ವಿ. ಮಂಜುನಾಥ.ಕೋ ಚಿ.ಹಾಲು ಒಕ್ಕೂಟದ ಅಧ್ಯಕ್ಷ ನಿದೆ೯ಶಕ ಕಾಂತರಾಜು, ವೆಂಕಟರಾಮರೆಡ್ಡಿ, ಮೂತಿ೯. ಬಲರಾಂ, ಮತ್ತಿತರರು ಹಾಜರಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading