ಕೆಂಭಾವಿ: ಪಟ್ಟಣದ ಹತ್ತಿರ ಹರಿಯುವ ಕೃಷ್ಣಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ತನ್ನ ಪ್ರಾಣದ ಹಂಗು ತೊರೆದು ಕಾಲುವೆಗೆ ಜಿಗಿದು ಮಹಿಳೆಯ ಪ್ರಾಣ ಉಳಿಸಿದ ಮುದನೂರ ಗ್ರಾಮದ ರಮೇಶ ಹೂಗಾರ ಯುವಕನ ಸಾಹಸವನ್ನು ಎಷ್ಟು ಕೊಂಡಾಡಿದರು ಸಾಲದು.ಯುವಕನ ಈ ಸಾಹಸವನ್ನು ಮೆಚ್ಚಿ ಆತನಿಗೆ ಇಂದು ರಾಜು ಗೌಡ ಎಂಎಲ್ ಎ ಅವರು ಯುವಕನಿಗೆ ಸನ್ಮಾನಿಸಿದರು.