ಮುದ್ದೇನಹಳ್ಳಿ: ಮಾನ್ಯ ಶಾಸಕರಾದ ಡಾ. ಸಿ ಎಂ ರಾಜೇಶ್ ಗೌಡ ರವರು ಹೊಸೂರು ಪಂಚಾಯತ್ ಮುದ್ದೇನಹಳ್ಳಿ ಗ್ರಾಮ ವಾತ್ಸವ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ನೀಡಲಾಯಿತು.
ಇದೇ ವೇಳೆ ಸಂಪ್ರದಾಯದಂತೆ ಕುರಿ ಮರಿ ಹಾಗೂ ಕರಿ ಕಂಬಳಿ ನೀಡಿದರು. ನಂತರ ಇಂದು ಮುದ್ದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಾಗಿ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ “ಚಿನ್ನಮ್ಮ ಕುಟೀರ” ವನ್ನು ಉದ್ಘಾಟನೆ ಮಾಡಲಾಯಿತು.
ನಂತರ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಚಂಗಾವರ ಮಾರಣ್ಣ ರವರು ವಾಜರಹಳ್ಳಿ ನರಸಿಂಹೆ ಗೌಡ್ರು ಕರಿಯಣ್ಣ, ಪ್ರಕಾಶ್, ಹೊಸೂರು ಗ್ರಾಮ ಸದಸ್ಯರು ಗ್ರಾಮಸ್ಥರು ಬಿಜೆಪಿ ಮುಖಂಡರು ಹಾಜರಿದ್ದರು.