2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ, ಆಗಿನ ಮುಖ್ಯಮಂತ್ರಿಗಳ ಕಾಲಿಗೆ ಬಿದಿದ್ರು ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಕೊಡಿಸುವೆ. ಒಂದು ವೇಳೆ ಸಮಾಜಕ್ಕಾಗಿ ಅಧಿಕಾರ ತ್ಯಾಗಕ್ಕೂ ಸಿದ್ಧನಿರುವೆ ಎಂದು ಬಿ. ನಾಗೇಂದ್ರ ತಿಳಿಸಿದರು.
ನಮ್ಮ ಸಮಿಶ್ರ ಸರ್ಕಾರದಲ್ಲಿ ಮೀಸಲಾತಿ ಪ್ರಗತಿಯಲ್ಲಿ ಇರುವಾಗಲೇ ಸರ್ಕಾರ ಬಿದ್ದೋಯ್ತು. ಆದ್ರೆ ಬಿಜೆಪಿ ಸರ್ಕಾರ ನಮ್ಮ ಸಮುದಾಯಕ್ಕೆ ಪೊಳ್ಳು ಭರವಸೆ ನೀಡುತ್ತಿದೆ. ಜತೆ ಸಮಾಜದ ಶ್ರೀಗಳನ್ನು ಕೂಡ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ ಅವರಿಗೂ ಮನವಿ ಮಾಡುತ್ತೇನೆ. ಸಮುದಾಯದ ಮೀಸಲಾತಿಯಲ್ಲಿ ಗೆದ್ದಿರುವ ನಾವು ಅದರ ಋಣ ತೀರಿಸಲು ಮೀಸಲಾತಿಗೆ ಒಟ್ಟಾಗಿ ಹೋರಾಡಬೇಕಿದೆ ಒಂದು ವೇಳೆ ಸಮಾಜದ ಬಯಸಿದರೆ ಎಲ್ಲದಕ್ಕೂ ಸಿದ್ಧ ಎಂದರು.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಅವಕಾಶ ಕೊಡದೆ ಬಿಜೆಪಿ ಸರ್ಕಾರ ನೀಚ ರಾಜಕಾರಣ ಮಾಡುತ್ತಿದೆ. ಅಲ್ಲದೆ ನಗರದಲ್ಲಿ ರಸ್ತೆ, ಚರಂಡಿ ಸೇರಿ ಮೂಲಸೌಲಭ್ಯ ಇಲ್ಲದೆ ಜನ ತತ್ತರಿಸಿದ್ದಾರೆ. ಹೀಗಿದ್ದರೂ ಬಿಜೆಪಿ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ. ನಾಗೇಂದ್ರ ಹೇಳಿದರು .