ಬೆಂಗಳೂರು: ಇಂದು ವೀರನಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ದೊಡ್ಡಮ್ಮ ದೇವಿಯ ದೇವಸ್ಥಾನದ ವಿಮಾನ ಗೋಪುರ, ಕಳಸ ಸ್ಥಾಪನೆ, ಕುಂಭಾಭಿಷೇಕ ಮಹೋತ್ಸವದ ಉದ್ಘಾಟನೆಯನ್ನು ಪೂಜ್ಯ ಶ್ರೀ ಬ್ರಹ್ಮಾನಂದ ಗುರೂಜಿ ಅವರ ಅಮೃತ ಹಸ್ತದಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾನ್ಯ ತೋಟಗಾರಿಕೆ ಸಚಿವರಾದಂತಹ ಶ್ರೀಯುತ ಮುನಿರತ್ನ ಅವರು ಮತ್ತು ಊರಿನ ಗ್ರಾಮಸ್ಥರು ಪಾಲ್ಗೊಂಡು ಗುರುಗಳ ಆಶೀರ್ವಾದಕ್ಕೆ ಮತ್ತು ದೇವಿಯ ಕೃಪೆಗೆ ಪಾತ್ರರಾದರು.