ಮೈಸೂರು: ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘ ನಿ ಈ ಹಿಂದೆ ನಿರ್ದೇಶಕರಾಗಿದ್ದ ಎಸ್.ಸ್ವಾಮಿ ಅವರು ಇತರೆ ಕೊ.ಆಪರೇಟಿವ್ ಸೊಸೈಟಿಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರಿಂದ ಹಾಗೂ ಸಂತೋಷ ಅವರು ಸ್ವಯಂ ಆಗಿ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಈ ಎರಡು ನಿರ್ದೇಶಕರ ಸ್ಥಾನಕ್ಕೆ ಸಾಮಾನ್ಯ ವರ್ಗದಿಂದ ಹಿನಕಲ್ ರಾಜಣ್ಣ ಅವರನ್ನು ಮತ್ತು ಪರಿಶಿಷ್ಟ ಜಾತಿ ಮೀಸಲಾತಿ ನಿಗದಿಯಾಗಿದ್ದ ಸ್ಥಾನಕ್ಕೆ ಅಲನಹಳ್ಳಿ ಎಂ. ಪ್ರಕಾಶ್. ಇವರನ್ನು 12-2-2022 ಇಂದು ಸಂಘದ ಅಧ್ಯಕ್ಷರಾದ ದೇವರಾಜ್ ಟಿ ಕಾಟೂರು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೋ ಆಪ್ಷನ್ ಮೂಲಕ ಆಡಳಿತ ಮಂಡಳಿಗೆ ನೂತನ ನಿರ್ದೇಶಕರನ್ನಾಗಿ, ಕರ್ನಾಟಕ ಸಹಕಾರ ಸಂಘಗಳ ನಿಯಮಗಳ ಅನುಸಾರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ನೂತನ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಚಿತ್ರದಲ್ಲಿ ಅಧ್ಯಕ್ಷರಾದ ದೇವರಾಜ್ ಟಿ ಕಾಟೂರು, ಉಪಾಧ್ಯಕ್ಷರಾದ ಸಾಹುಕಾರಹುಂಡಿ ಮಹದೇವು ನಿರ್ದೇಶಕರಾದ ಹಿನಕಲ್ ಸಿ.ಸ್ವಾಮಿ , ಬಿ.ಎನ್ ನಾರಾಯಣಸ್ವಾಮಿ,ಪ್ರೊ.ಸುತ್ತೂರುನಂಜುಂಡಸ್ವಾಮಿ,ಹೊಸರಾಮನಹಳ್ಳಿ , ನಾರಾಯಣ್, ಶಿವಕುಮಾರಸ್ವಾಮಿ, ಹಿನಕಲ್ ವಿಜಯಕುಮಾರ್ ಹಾಗೂ ಕಾರ್ಯದರ್ಶಿ ಕುಮಾರಿ ಲಕ್ಷ್ಮಿ ಕಾಣಬಹುದು.