ತುಮಕೂರು: ಆತ್ಮೀಯ ಸ್ನೇಹಿತರೇ..ಪತ್ರಕರ್ತ ಬಂಧುಗಳೇ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು ತೋವಿನಕೆರೆ ಗ್ರಾಮದ ಟಿ.ಎಸ್. ಕೃಷ್ಣಮೂರ್ತಿ ಆದ ನಾನು 12 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಪ್ರಜಾಮನ ಕನ್ನಡ ದಿನಪತ್ರಿಕೆ ಸಂಪಾದಕರಾದ ಟಿ.ಎಸ್.ಕೃಷ್ಣಮೂರ್ತಿ ಹೇಳಿದ್ದಾರೆ.
2ವರ್ಷ ಜಿಲ್ಲಾ ವರದಿಗಾರನಾಗಿ ತುಮಕೂರಿನಲ್ಲಿ ಕಾರ್ಯನಿರ್ವಹಿಸಿದ್ದೇನೆ, ಇದೇ ತಿಂಗಳ 27 ರಂದು ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ (ನಿರ್ದೇಶಕ) ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದೇನೆ, ನಿಮ್ಮ ಅಮೂಲ್ಯವಾದ ಮತ ನೀಡುವುದರ ಮೂಲಕ ನನ್ನನ್ನು ಬೆಂಬಲಿಸಿ ಜಯಶಾಲಿಯಾಗಿ ಮಾಡಬೇಕೆಂದು ತಮ್ಮಲ್ಲಿ ಕೇಳಿಕೋಳ್ಳುತ್ತೇನೆ ಎಂದು ಟಿ.ಎಸ್.ಕೃಷ್ಣಮೂರ್ತಿ ಹೇಳಿದ್ದಾರೆ