ಚಿಕ್ಕಮಗಳೂರು: ಚಿಕ್ಕಮಗಳೂರು ಐಡಿಎಸ್ ಜಿ ಕಾಲೇಜಿನಲ್ಲಿ ನೀಲಿ ಶಾಲು ಧರಸಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ.ಹಿಜಾಬ್ – ಕೇಸರಿ ಶಾಲು ಬಳಿಕ ಇದೀಗ ನೀಲಿ ಶಾಲಿನ ಸರದಿ ಆರಂಭವಾಗಿದೆ.
ಹಿಜಾಬ್ ಮುಂದುವರಿಸಬೇಕು ಎಂದು ಆಗ್ರಹಿಸಿ ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ‘ಜೈ ಭೀಮ್’ ಘೋಷಣೆ ಕೂಗಿದರು.
ಸರ್ಕಾರದ ಆದೇಶವನ್ನು ನಮ್ಮ ಕಾಲೇಜಿನಲ್ಲಿ ಪಾಲಿಸುತ್ತಿಲ್ಲ. ಸಮವಸ್ತ್ರ ಹಾಕದೆ ಬಂದರೆ ವಾಪಸ್ ಕಳಿಸುತ್ತಿದ್ದಾರೆ. ಇಷ್ಟು ದಿನ ಇಲ್ಲದ ಕಾನೂನು ಈಗ ನಮಗೆ ಹೇಳುತ್ತಿದ್ದಾರೆ. ಕೇಸರಿ ಶಾಲು ತೆಗೆಯುವವರೆಗೂ ನಾವು ನೀಲಿ ಶಾಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.