ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಮುದಾಯಭವನ ಜನಪ್ರತಿನಿಧಿಗಳ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಅಸಹಾಯಕತೆಯಿಂದ ನಿರುಪಯುಕ್ತವಾಗಿದೆ.
ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಈವರೆಗೆ ಯಾವುದೇ ಮಹನೀಯರ ಹೆಸರಿನಲ್ಲಿ ಒಂದೇಒಂದು ಸಮುದಾಯಭವನದ ಕಟ್ಟಡವಿರಲಿಲ್ಲ. ಪಟ್ಟಣದ ಕೇಂದ್ರಸ್ಥಾನದಲ್ಲಿ ಪ್ರತಿದಿನ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅನೇಕ ಮಹನೀಯರ ಜಯಂತಿಗಳು ಸಮಾಜ ಸುಧಾರಕರ ಸಾಂಸ್ಕೃತಿಕ ಅನೇಕ ಸಭೆ-ಸಮಾರಂಭಗಳನ್ನು ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕಾದರೆ ದುಪ್ಪಟ್ಟು ಬಾಡಿಗೆ ನೀಡಿ ಖಾಸಗಿ ಕಟ್ಟಡಗಳಲ್ಲಿ ನಡೆಸುವಂತಾಗಿದೆ. ಈಗ ಸಾರ್ವಜನಿಕರ ಅನುಕೂಲಕ್ಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಒಂದು ಕೋಟಿ ರೂಗಳ ವೆಚ್ಚದಲ್ಲಿ ಅದ್ಭುತವಾಗಿ ಸುಂದರವಾದ ಭವನದ ಕಟ್ಟಡಕ್ಕೆ ಹಾಗೂ ಇಲಾಖೆಯ ಕಚೇರಿಯ ಕೊಠಡಿಗೆ ಸೇರಿದೆ.
ಅನುದಾನವನ್ನು ನೀಡಿದೆ ಆದರೆ ಕಾಮಗಾರಿಯ ಗುತ್ತಿಗೆಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಸಂಸ್ಥೆಯವರು ಪಡೆದು ಭವ್ಯವಾದ ದೇವರಾಜ ಅರಸು ಸಮುದಾಯಭವನದ ಕಟ್ಟಡವನ್ನು ನಿರ್ಮಾಣ ಮಾಡಿ ಆರು ತಿಂಗಳಾದರೂ ಗುತ್ತಿಗೆದಾರರು ಸಂಬಂಧಪಟ್ಟ ಇಲಾಖೆಯ ಅವರಿಗೆ ಹಸ್ತಾಂತರಿಸಿಲ್ಲ